ADVERTISEMENT

ಸಾವಯವ ಕೃಷಿ ಪದ್ಧತಿ -ಕೊಳೆರೋಗ ತಡೆಗೆ ಮದ್ದು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:20 IST
Last Updated 2 ಸೆಪ್ಟೆಂಬರ್ 2013, 5:20 IST

ರಿಪ್ಪನ್‌ಪೇಟೆ: ರೈತರು ಕೃಷಿ ಕಾರ್ಯದಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಂಡಲ್ಲಿ ಆರಂಭದಲ್ಲಿಯೇ ಬೆಳೆಗಳಿಗೆ ಹಬ್ಬುವ ಕೀಟಬಾಧೆಯಿಂದ ಮುಕ್ತಿ ಪಡೆಯಬಹುದು ಎಂದು ಶಿವಮೊಗ್ಗ ಕೃಷಿ  ವಿಶ್ವವಿದ್ಯಾಲಯದ ತಜ್ಞ ಡಾ. ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ರೈತಸಂಪರ್ಕ ಕೇಂದ್ರದಲ್ಲಿ ಶನಿವಾರ  ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಭೂ ಚೇತನ ಯೋಜನೆಯಡಿ, ಲಘು ಪೋಷ ಕಾಂಶಗಳ ಬಳಕೆ ಹಾಗೂ ಮಲೆನಾಡಿನ ಅಡಿಕೆ ಬೆಳೆಗಳಲ್ಲಿ ಕಾಣಿಸಿಕೊಂಡಿರುವ ಕೊಳೆ ರೋಗ ತಡೆ ಕುರಿತು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ದೇವರಾಜ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಕಾಲದಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬೇಕು ಎಂದರು.

ತಜ್ಞರಾದ ಡಾ. ಶಿವಣ್ಣ , ಡಾ. ಗುರುಮೂರ್ತಿ ಸಭೆಯಲ್ಲಿ ಮಾಹಿತಿ ನೀಡಿದರು. ಡಾ. ಶೇಷಗಿರಿ ಪ್ರಾರ್ಥಿಸಿದರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ ಸ್ವಾಗತಿಸಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.