ADVERTISEMENT

ಸೊರಬ: 24ರಂದು ಬೆಂಗಳೂರು ಚಲೋ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 5:55 IST
Last Updated 20 ಫೆಬ್ರುವರಿ 2012, 5:55 IST

ಸೊರಬ: ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ. 24ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

 ಶಾಲಾ ಸಮಿತಿ ಹಾಗೂ ಶಾಲಾ ಆಡಳಿತದವರು ಕಾರ್ಯಕರ್ತೆಯರನ್ನು ಅಂದು ಕಾರ್ಯಕ್ರಮಕ್ಕೆ ಕಳುಹಿಸಿ ಕೊಡಬೇಕು ಎಂದು ಫೆಡರೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಕೆ. ಹೊಸಕೊಪ್ಪ ಮನವಿ ಮಾಡಿದರು.

ಭಾನುವಾರ ಆನವಟ್ಟಿಯಲ್ಲಿ ಕಾರ್ಯಕರ್ತೆಯರ ಸಭೆಯಲ್ಲಿ ಅವರು ಮಾತನಾಡಿದರು. ಧರಣಿಯಲ್ಲಿ ಭಾಗವಹಿಸಲು ಅವಕಾಶ ನೀಡದೇ ಇದ್ದಲ್ಲಿ ಸ್ಥಳೀಯ ಮಟ್ಟದಲ್ಲಿಯೇ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸರ್ಕಾರಿ ನೌಕರರು, ಪಂಚಾಯ್ತಿ ಮಟ್ಟದಿಂದ ಹಿಡಿದು, ರಾಷ್ಟ್ರಪತಿವರೆಗೆ ವೇತನ ಹೆಚ್ಚಳವಾಗಿದ್ದರೂ, ತುತ್ತು ಅನ್ನಕ್ಕೆ ಪರಿತಪಿಸುತ್ತಿರುವ ಕಾರ್ಯಕರ್ತೆಯರ ಬಗ್ಗೆ ಕನಿಷ್ಠ ರೂಪದಲ್ಲಿಯೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಠ ವೇತನ, ಸೇವಾಭದ್ರತೆ, ನಿವೃತ್ತಿ ವೇತನ, ಅಪಘಾತ ಪರಿಹಾರ, ಹೆರಿಗೆ, ವೈದ್ಯಕೀಯ ಭತ್ಯೆ ನೀಡಲು ಆಗ್ರಹಿಸುವುದು ಧರಣಿಯ ಉದ್ದೇಶ ಎಂದರು.

ಸಂಚಾಲಕರಾದ ಮರಿಬಸಪ್ಪ, ಬಸವರಾಜ ಹಿರೇಮಠ, ರಾಜಪ್ಪ, ಮಂಜುಳಾ, ಶಾಂತಮ್ಮ, ಜಯಮ್ಮ, ಗೀತಾ, ನೇತ್ರಾ ಹಾಜರಿದ್ದರು.

ವಾರ್ಷಿಕ ವಿಶೇಷ ಶಿಬಿರ
ಯಾವುದೇ ದುಶ್ಚಟ ಇಲ್ಲದೇ, ದೈಹಿಕ ಶ್ರಮದ ಬಳಕೆ, ಮಿತ ಆಹಾರ ಸೇವನೆಯಿಂದ ದೀರ್ಘಕಾಲದ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ವೈದ್ಯಾಧಿಕಾರಿ ಡಾ.ನಾಗೇಂದ್ರಪ್ಪ ಸಲಹೆ ನೀಡಿದರು.

ಕುಮ್ಮೂರು ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಹದಿಹರೆಯದ ಸಮಸ್ಯೆಗಳು ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಮೂಢನಂಬಿಕೆ, ಹತಾಶ ಮನೋಭಾವನೆ ತೊರೆಯಬೇಕು. ವಿದ್ಯಾರ್ಥಿಗಳಲ್ಲಿ ಸಮಸ್ಯೆ ಉಂಟಾದಾಗ ಪೋಷಕರು ತಾಳ್ಮೆಯಿಂದ ಮಾರ್ಗದರ್ಶನ ಮಾಡಬೇಕು ಎಂದರು.

ಗ್ರಾಮದ ನಿವೃತ್ತ ಕೆಎಎಸ್ ಅಧಿಕಾರಿ ಕುಮ್ಮೂರು ಬಸವಣ್ಯಪ್ಪ ಅಧ್ಯಕ್ಷತೆ   ವಹಿಸಿದ್ದರು.  ಪತ್ರಿಕಾ ವಿತರಕ ಉಮೇಶ್, ಗ್ರಾಮಸಮಿತಿ ಸದಸ್ಯರಾದ ಬಸವರಾಜಪ್ಪ,  ರಾಜಪ್ಪ ಉಪಸ್ಥಿತರಿದ್ದರು.
ಶಿಬಿರಾಧಿಕಾರಿಗಳಾದ ಲೋಕೇಶ್, ಜಯಣ್ಣ ಹಾಜರಿದ್ದರು. ಮಲ್ಲೇಶಾಚಾರಿ ಸ್ವಾಗತಿಸಿದರು
. ಚಂದ್ರಶೇಖರ ಪಾಟೀಲ್ ವಂದಿಸಿದರು. ಗೀತಾ ವಿ. ಗೌಡ, ಶರತ್ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.