ADVERTISEMENT

ಪಾರ್ಶ್ವನಾಥ ತೀರ್ಥಂಕರ ದೀಕ್ಷಾ ಮಹೋತ್ಸವ

ಜೈನ ಮುನಿಗಳ ನೇತೃತ್ವದಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 16:56 IST
Last Updated 9 ಜನವರಿ 2021, 16:56 IST
ಭದ್ರಾವತಿಯಲ್ಲಿ ಶನಿವಾರ 23ನೇ ತೀರ್ಥಂಕರ ಪ್ರಭು ಪಾರ್ಶ್ವನಾಥ ತೀರ್ಥಂಕರ ದೀಕ್ಷಾ ಮಹೋತ್ಸವ ನಿಮಿತ್ತ ಸಂತರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು
ಭದ್ರಾವತಿಯಲ್ಲಿ ಶನಿವಾರ 23ನೇ ತೀರ್ಥಂಕರ ಪ್ರಭು ಪಾರ್ಶ್ವನಾಥ ತೀರ್ಥಂಕರ ದೀಕ್ಷಾ ಮಹೋತ್ಸವ ನಿಮಿತ್ತ ಸಂತರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು   

ಭದ್ರಾವತಿ: ಇಲ್ಲಿನ ಜೈನ ಸಭಾ ಭವನದಲ್ಲಿ ಜೈನ ಆಚಾರ್ಯತ್ರಯರ ನೇತೃತ್ವದಲ್ಲಿ ಶನಿವಾರ 23ನೇ ತೀರ್ಥಂಕರ ಪಾರ್ಶ್ವನಾಥಜೀ ಮಹಾರಾಜ್ ಅವರ ಜನ್ಮದಿನ ಹಾಗೂ ದೀಕ್ಷಾ ಸಮಾರಂಭ ನಡೆಯಿತು.

ಜೈನ ಭವನದಿಂದ ಪಾರ್ಶ್ವನಾಥ ಭಾವಚಿತ್ರದ ಜತೆಗೆ ಶಾಂತಿ, ಸಹಬಾಳ್ವೆ ಸಾರುವ ಜೈನ ಧ್ವಜಗಳನ್ನು ಹಿಡಿದು ನೂರಾರು ಮಂದಿ ನಗರದ ಪ್ರಮುಖ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ಜೈನ ಮುನಿಗಳಾದ ಹೀರಾಚಂದ್ರ ಸುರೀಶ್ವರಜೀ, ರುಷಿಲಾಲ್ ವಿಜಯಜೀ, ಜಮಾ ರತನ ವಿಜಯಜೀ ಅವರು ಭಕ್ತರ ಜತೆಗೆ ಹೆಜ್ಜೆಹಾಕಿ ತೀರ್ಥಂಕರರ ಸಂದೇಶ ಸಾರಿದರು.

ADVERTISEMENT

ನಂತರ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿಗಳು, ‘ಸರ್ವವೂ ದೇವರಿಗೆ ಅರ್ಪಿತ. ಇದರೊಂದಿಗೆ ಶಾಂತಿ, ಸಹಬಾಳ್ವೆ, ನೊಂದವರ ಬಾಳಿಗೆ ಬೆಳಕು ನೀಡುವ ಕೆಲಸ ಮಾಡುವುದೇ ನೈಜ ಅಧ್ಯಾತ್ಮ’ ಎಂದರು.

ಜೈನ ಸಮಾಜದ ಮುಖಂಡರಾದ ರತನ್ ಚಂದ್, ದಿನೇಶಕುಮಾರ್, ಭರತಕುಮಾರ್, ಸುಧೀಶ್, ವಿಕ್ರಂ ಹಾಜರಿದ್ದರು.

ಐದು ವರ್ಷದ ಹಿಂದೆ ಇಲ್ಲಿಯೇ ಸನ್ಯಾಸ ಸ್ವೀಕಾರ ಮಾಡಿದ್ದ ರುಷಿಲಾಲ್ ವಿಜಯಜೀ ಹಾಗೂ ಜಮಾ ರತನ ವಿಜಯಜೀ ಅವರು ನಿರಂತರ ದೇಶ ಸಂಚಾರ ನಡೆಸಿ ಪುನಃ ಇಲ್ಲಿಗೆ ಬಂದು ಎರಡು ದಿನಗಳ ಕಾಲ 23ನೇ ತೀರ್ಥಂಕರರ ದೀಕ್ಷಾ ಮಹೋತ್ಸವ ನಡೆಸಿಕೊಟ್ಟಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.