ADVERTISEMENT

ಹದಗೆಟ್ಟ ವ್ಯವಸ್ಥೆಯಲ್ಲಿ ಗಟ್ಟಿ ದನಿ ಅಗತ್ಯ

‘ಕಾಗೆ ಮುಟ್ಟಿದ ನೀರು’ ಪುಸ್ತಕ ಬಿಡುಗಡೆಗೊಳಿಸಿದ ವೈ.ಎಸ್‌.ವಿ. ದತ್ತಾ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:43 IST
Last Updated 8 ಆಗಸ್ಟ್ 2022, 4:43 IST
ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಅಹರ್ನಿಶಿ ಪ್ರಕಾಶನದಿಂದ ಆಯೋಜಿಸಿದ್ದ ಪುರುಷೋತ್ತಮ ಬಿಳಿಮಲೆಯವರ ಆತ್ಮಕಥೆ ‘ಕಾಗೆ ಮುಟ್ಟಿದ ನೀರು’ (ನಾಲ್ಕನೇ ಮುದ್ರಣ) ಪುಸ್ತಕವನ್ನು ಮಾಜಿ ಶಾಸಕ ವೈ.ಎಸ್‌.ವಿ ದತ್ತಾ ಬಿಡುಗಡೆಗೊಳಿಸಿದರು.
ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಅಹರ್ನಿಶಿ ಪ್ರಕಾಶನದಿಂದ ಆಯೋಜಿಸಿದ್ದ ಪುರುಷೋತ್ತಮ ಬಿಳಿಮಲೆಯವರ ಆತ್ಮಕಥೆ ‘ಕಾಗೆ ಮುಟ್ಟಿದ ನೀರು’ (ನಾಲ್ಕನೇ ಮುದ್ರಣ) ಪುಸ್ತಕವನ್ನು ಮಾಜಿ ಶಾಸಕ ವೈ.ಎಸ್‌.ವಿ ದತ್ತಾ ಬಿಡುಗಡೆಗೊಳಿಸಿದರು.   

ಶಿವಮೊಗ್ಗ: ‘ಹದಗೆಟ್ಟ ಇಂದಿನ ವ್ಯವಸ್ಥೆಯಲ್ಲಿ ಧೈರ್ಯವಾಗಿ ಹಾಗೂ ನಿಷ್ಠುರವಾಗಿ ಮಾತನಾಡುವುದು ಅಗತ್ಯ. ಸಮಾಜದಲ್ಲಿ ದುಷ್ಟ ಶಕ್ತಿಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ಗಟ್ಟಿ ದನಿಯಲ್ಲಿ ಮಾತನಾಡುವುದು ಅಗತ್ಯ’ ಎಂದು ಮಾಜಿ ಶಾಸಕ ವೈ.ಎಸ್‌.ವಿ. ದತ್ತಾ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಅಹರ್ನಿಶಿಪ್ರಕಾಶನದಿಂದ ಆಯೋಜಿಸಿದ್ದ
ಪುರುಷೋತ್ತಮ ಬಿಳಿಮಲೆ ಅವರ ಆತ್ಮಕಥೆ ‘ಕಾಗೆ ಮುಟ್ಟಿದ ನೀರು’ (ನಾಲ್ಕನೇ ಮುದ್ರಣ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪುಸ್ತಕದಲ್ಲಿ ಅವರು ಒಂಟಿ ಧ್ವನಿಯಾಗಿದ್ದಾರೆ. ಸಮಾಜದಲ್ಲಿ ಗಟ್ಟಿ ಧ್ವನಿಯಾಗಿ ಮಾತನಾಡುವ ಕಡಿಮೆ ಜನರಲ್ಲಿ ಒಬ್ಬರಾಗಿದ್ದಾರೆ. ಇದು ಹೆಮ್ಮೆಯ ಸಂಗತಿ.ಕೃತಿಯಲ್ಲಿ ಬರಹದ ಮೂಲಕ ಸತ್ಯ ಹಾಗೂ ವಾಸ್ತವ ಅಂಶ ಅನಾವರಣಗೊಳಿಸಿದ್ದಾರೆ ಎಂದರು.

ADVERTISEMENT

‘ತಾವು ಬದುಕಿನುದ್ದಕ್ಕೂ ನಡೆದ ಹಾದಿಯ ಸಂಕೀರ್ಣತೆಯನ್ನು ಹಾಗೂ ಅನುಭವಗಳನ್ನು ‘ಕೃತಿಯಲ್ಲಿ ಸಾದರಪಡಿಸಿದ್ದಾರೆ’ ಎಂದುಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್‌ ಮೂರೊಳ್ಳಿ ಹೇಳಿದರು.

ಕನ್ನಡ ಸಾಹಿತ್ಯ ವಿಮರ್ಶೆ ಕೊಂದು ಬಹಳ ದಿನಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಕೇವಲ ಪರಿಚಯ ಹಾಗೂ ಪರಸ್ಪರ ಹೊಗಳಿಕೆ ತರಹದ ವಿಮರ್ಶೆ ಜಾಸ್ತಿಯಾಗಿದೆ. ಇದು ದುರಂತ ಎಂದುಪ್ರಾಧ್ಯಾಪಕ ಮತ್ತು ಲೇಖಕರಾದ ಪ್ರೊ.ಬಿ.ಎಲ್‌.ರಾಜು ಹೇಳಿದರು.

ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ,ಲೇಖಕ ಡಾ.ಪುರುಷೋತ್ತಮ ಬಿಳಿಮಲೆ, ಕವಯತ್ರಿ ಡಿ.ಬಿ.ರಜಿಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.