ADVERTISEMENT

ಇಂದಿನಿಂದ ರಾಷ್ಟೀಯ ಸೇವಾ ಯವಜನೋತ್ಸವ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:20 IST
Last Updated 5 ಜೂನ್ 2019, 15:20 IST

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿ ಸಹಭಾಗಿತ್ವದಲ್ಲಿ ಜೂನ್ 6ರಿಂದ 10ರ ವರೆಗೆ ರಾಜ್ಯಮಟ್ಟದ ರಾಷ್ಟೀಯ ಸೇವಾ ಯವಜನೋತ್ಸವ ನಡಯಲಿದೆ.

ಕುವೆಂಪು ವಿಶ್ವವಿದ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆಯುವ ಈ ಯುವಜನೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಜೂನ್ 6ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಚಾಲನೆ ನೀಡುವರು ಎಂದು ಕುವೆಂಪು ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕೆ.ವಿ. ಗಿರಿಧರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಮಟ್ಟದ ಈ ಯುವಜನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಗಳು, ಶ್ರಮದಾನ, ಸ್ವಚ್ಛತೆ, ಸಾಂಸ್ಕೃತಿಕ ಭಾವೈಕ್ಯತೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ. ಪ್ರತಿದಿನ ಧ್ವಜಾರೋಹಣ, ಯೋಗ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐದು ದಿನಗಳು ನಡೆಯುವೀ ಉತ್ಸವದಲ್ಲಿ ರಾಜ್ಯದ 40 ವಿಶ್ವವಿದ್ಯಾಲಯಗಳ 350 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.

ADVERTISEMENT

ಕುಲಪತಿ ಪ್ರೊ.ಜೋಗನ್‌ಶಂಕರ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ವಿಧಾನಸಭಾ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಎಲ್ಲ ಜನರಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವರು ಎಂದರು.

ಜೂನ್ 10ರಂದು ಬೆಳಿಗ್ಗೆ 11ಕ್ಕೆ ಸಮಾರೋಪ ನಡೆಯಲಿದೆ. ಉಳಿದಂತೆ ವಿಶೇಷ ಉಪನ್ಯಾಸ ಕಾರ್ಯಕ್ರಗಳು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಜೂನ್ 7ರಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ‘ಬದುಕು ಗೆಲ್ಲುವ ಸೂತ್ರಗಳು’ ಕುರಿತು, 8ರಂದು ಡಾ.ವಿ.ಎಲ್.ಎಸ್. ಕುಮಾರ್ ವಿಪತ್ತು ನಿರ್ವಹಣೆಯಲ ಎನ್‌ಎಸ್‌ಎಸ್‌ ಸ್ವಯಂ ಸೇವಕರ ಪಾತ್ರ ಕುರಿತು, ಡಾ. ವಿಘ್ನೇಶ್ ಭಟ್ ಅವರು ‘ರಾಷ್ಟ್ರ ನಿರ್ಮಾಣ ಮತ್ತು ಯುವಶಕ್ತಿ’ ಕುರಿತು ಉಪನ್ಯಾಸ ನೀಡುವರು. ಈ ಮೂರೂ ಉಪನ್ಯಾಸಗಳು ಪ್ರತಿದಿನ 2.30ರಿಂದ 3.30ರ ತನಕ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌ಇಎಸ್‌ ಸಂಸ್ಥೆಯ ಕುಲಸಚಿವ ಪ್ರೊ. ಟಿ.ಎಸ್. ಹೂವಯ್ಯಗೌಡ, ನಾಗರಾಜ್, ಜಗದೀಶ್, ಸಹ ಪ್ರಾಧ್ಯಾಪಕ ಡಾ.ಮೋಹನ್‌ಚಂದ್ರಗುತ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.