ADVERTISEMENT

ಎಂಪಿಎಂ ನೆಡುತೋಪು ಮರಳಿ ಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 12:03 IST
Last Updated 3 ಜೂನ್ 2020, 12:03 IST
ಶಿವಮೊಗ್ಗದಲ್ಲಿ ಬುಧವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಎಪಿಎಂ ನೆಡುತೋಪು ವಾಪಸ್‌ ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಬುಧವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಎಪಿಎಂ ನೆಡುತೋಪು ವಾಪಸ್‌ ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಭದ್ರಾವತಿಯ ಮೈಸೂರು ಪೇಪರ್‌ ಮಿಲ್‌ (ಎಂಪಿಎಂ)ಗೆ ಕಚ್ಚಾ ಸಾಮಗ್ರಿ ಪೂರೈಸಲುನೀಡಿದ್ದ ಸಾವಿರಾರುಹೆಕ್ಟೇರ್ ಅರಣ್ಯ ಭೂಮಿಯಗುತ್ತಿಗೆ ಮುಗಿಯುತ್ತಾ ಬಂದಿದ್ದು,ಸರ್ಕಾರಮರಳಿ ವಶಕ್ಕೆಪಡೆಯಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪಶ್ಚಿಮಘಟ್ಟದವಿವಿಧೆಡೆ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿಯನ್ನು ಎಂಪಿಎಂಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಅವಧಿ ಪ್ರಸಕ್ತ ವರ್ಷದ ಆಗಸ್ಟ್ ವೇಳೆಗೆ ಅಂತ್ಯವಾಗಲಿದೆ. ಕಾಗದ ಕಾರ್ಖಾನೆಸಂಪೂರ್ಣ ಸ್ಥಗಿತವಾಗಿದೆ. ಮತ್ತೆ ಮುಂದುವರಿಯುವ ಲಕ್ಷಣಗಳು ಕಾಣುತ್ತಿಲ್ಲ.ಅರಣ್ಯ ಭೂಮಿಯ ಆವಶ್ಯಕತೆ ಕಾರ್ಖಾನೆಗೆಇರುವುದಿಲ್ಲ. ಖಾಸಗಿಯವರಿಗೆವಹಿಸಲುಎಂಪಿಎಂ ಆಡಳಿತ ಮಂಡಳಿಗೆ ಗುತ್ತಿಗೆ ನಿಯಮದಲ್ಲಿ ಅವಕಾಶ ಇಲ್ಲ.ಹಾಗಾಗಿ,ಸರ್ಕಾರ ಭೂಮಿ ವಾಪಸ್ ಪಡೆಯಬೇಕುಎಂದು ಆಗ್ರಹಿಸಿದರು.

ಪಶ್ಚಿಮಘಟ್ಟದಲ್ಲಿ ಹೆಚ್ಚು ನಿತ್ಯಹರಿದ್ವರ್ಣದ ಕಾಡುಗಳು ಇವೆ. ಅಮೂಲ್ಯವಾದ ಸಸ್ಯಗಳು, ಜೀವರಾಶಿಗಳಿವೆ.ನದಿಗಳಿವೆ. ಈ ಪರಿಸರ ಹಾಳಾದರೆ ಇಡೀ ಮಾನವ ಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾರ್ಖಾನೆಗೆ ನೀಡಿದ ನೆಡುತೋಪುಗಳಲ್ಲಿ ಅಕೇಶಿಯಾ, ನೀಲಗಿರಿಬೆಳೆಸಿದಮೇಲೆ ನೂರಾರು ಪಕ್ಷಿ ಸಂಕುಲಗಳು ಕಣ್ಮರೆಯಾಗಿದೆ. ಕಾಡಿನಲ್ಲಿ ಸ್ವಾಭಾವಿಕವಾಗಿ ಸಿಗುತ್ತಿದ್ದ ಹಣ್ಣುಗಳು ಇಲ್ಲವಾಗಿವೆ. ಹಣ್ಣುಗಳನ್ನೇ ನಂಬಿಕೊಂಡಿದ್ದಮಂಗಗಳು ಹೊಲ, ಗದ್ದೆ, ತೋಟಗಳಿಗೆ ದಾಳಿ ಇಡುತ್ತಿವೆ. ರೈತರಿಗೆ ಪ್ರತಿ ವರ್ಷವೂಕೋಟ್ಯಂತರ ನಷ್ಟವಾಗುತ್ತಿದೆ ಎಂದು ದೂರಿದರು.

ADVERTISEMENT

ಇಲ್ಲಿ ಝರಿ, ತೊರೆಗಳು ಕಾಣೆಯಾಗಿವೆ. ಅಕೇಶೀಯ, ನೀಲಗಿರಿ ತೋಪುಗಳಿಂದ ಬಿಸಿ ಗಾಳಿ ಉಂಟಾಗಿ ಇಡೀ ಮಲೆನಾಡೇ ನಾಶದತ್ತ ಸಾಗಿದೆ. ಮತ್ತೆ ಈ ಭೂಮಿಯಲ್ಲಿನೀಲಗಿರಿ, ಆಕೇಶಿಯಾ ಬೆಳೆಸಲು ಅವಕಾಶ ನೀಡಬಾರದು. ಸ್ವಾಭಾವಿಕ ಅರಣ್ಯಬೆಳೆಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಮುಖಂಡರಾದ ಕೆ.ಟಿ.ಗಂಗಾಧರ್, ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ರಾಜೇಂದ್ರ ಕಂಬಳಗೆರೆ, ನಾಗೇಶನ್, ಮಾಲತೇಶ್ ಬೊಮ್ಮನಕಟ್ಟೆ, ಆದರ್ಶ ಹುಂಚದಕಟ್ಟೆ, ಪ್ರಸನ್ನ ಹಿತ್ತಲಗದ್ದೆ, ಮಂಜುನಾಥ ನವಿಲೆಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.