ADVERTISEMENT

ಸಿಮ್ಸ್ ನಿರ್ದೇಶಕರಾಗಿ ವಿರೂಪಾಕ್ಷಪ್ಪ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 4:48 IST
Last Updated 3 ಸೆಪ್ಟೆಂಬರ್ 2022, 4:48 IST
 ವಿರೂಪಾಕ್ಷಪ್ಪ
ವಿರೂಪಾಕ್ಷಪ್ಪ   

ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್‌) ನೂತನ ನಿರ್ದೇಶಕ ರಾಗಿ ಶುಕ್ರವಾರ ಡಾ.ವಿರೂಪಾಕ್ಷಪ್ಪ ವಿ. ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ನಿರ್ದೇಶಕ ಡಾ.ಒ.ಸಿದ್ದಪ್ಪ ಅವರು ಡಾ.ವಿರೂಪಾಕ್ಷಪ್ಪ ಅವರಿಗೆ ಹೂಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸಿದರು.

ಸಿಮ್ಸ್‌ನಲ್ಲಿ ಜನರಲ್ ಮೆಡಿಸಿನ್‌ ವಿಭಾಗದಲ್ಲಿ ಡಾ.ವಿರೂಪಾಕ್ಷಪ್ಪ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.‌ ಈ ಹಿಂದೆ ಮೆಗ್ಗಾನ್ ಅಧೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.