ಸಾವು
(ಪ್ರಾತಿನಿಧಿಕ ಚಿತ್ರ)
ರಿಪ್ಪನ್‌ಪೇಟೆ: ಇಬ್ಬರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಮ್ಮಡಿಕೊಪ್ಪ ಗ್ರಾಮದ ಸುಜಾತಾ (33), ಆಯನೂರು ಕೋಟೆ ಗ್ರಾಮದ ಸಚಿನ್ (27) ಆತ್ಮಹತ್ಯೆ ಮಾಡಿಕೊಂಡವರು.
14 ವರ್ಷಗಳ ಹಿಂದೆ ಸುಜಾತಾ ಅವರ ವಿವಾಹವಾಗಿತ್ತು. ಬೆಳಗಾವಿಯಲ್ಲಿ ನೆಲೆಸಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 3–4 ವರ್ಷಗಳ ಹಿಂದೆ ಆಕೆಯ ಪತಿ ನಾಪತ್ತೆಯಾಗಿದ್ದರು. ಬಳಿಕ ಸುಜಾತಾ ತವರು ಮನೆಗೆ ಹಿಂದಿರುಗಿ ಕೂಲಿ ಕೆಲಸ ಮಾಡಿ ಮಕ್ಕಳಿಬ್ಬರನ್ನು ಸಲಹುತಿದ್ದರು. ಈ ನಡುವೆ ಸಚಿನ್ ಎಂಬಾತನೊಂದಿಗೆ ಸುಜಾತಾ ಸ್ನೇಹ ಬೆಳೆಸಿಕೊಂಡಿದ್ದರು.
ಸುಜಾತಾ ಕಷ್ಟಕ್ಕೆ ಸ್ಪಂದಿಸಿ, ಬಾಳು ನೀಡುವ ಉದ್ದೇಶದಿಂದ ವಾರದ ಹಿಂದೆ ಸುಜಾತಾ ಜೊತೆ ಸಚಿನ್ ಬಂದು ವಾಸವಾಗಿದ್ದರು ಎನ್ನಲಾಗಿದೆ.
ಆದರೆ, ಗುರುವಾರ ಮನೆಯಲ್ಲಿ ಇಬ್ಬರೂ ವಿಷ ಸೇವಿಸಿದ್ದಾರೆ. ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ರಾತ್ರಿ ಮೃತಪಟ್ಟಿದ್ದಾರೆ. ಈ ಕುರಿತು ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.