ADVERTISEMENT

`ಗುರುಗಳ ಪ್ರಚಾರಕ್ಕೆ ವಿದ್ಯಾರ್ಥಿಗಳ ಸಾಥ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 8:37 IST
Last Updated 25 ಏಪ್ರಿಲ್ 2013, 8:37 IST

ಗುಬ್ಬಿ: ಗುರುಗಳು ವಿಧಾನಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದು, ವಿದ್ಯಾರ್ಥಿಗಳು ಪ್ರಚಾರದ ಖರ್ಚಿಗೆಂದು 30 ಸಾವಿರ ರೂಪಾಯಿ ಸಂಗ್ರಹಿಸಿ ಸಾಥ್ ನೀಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ಅತಿಥಿ ಉಪನ್ಯಾಸಕರಾಗಿದ್ದ ಪಕ್ಷೇತರ ಅಭ್ಯರ್ಥಿ ಪಿ.ಸಿ.ಲೋಕೇಶ್ ವಿದ್ಯಾರ್ಥಿಗಳೊಂದಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.

ಉನ್ನತ ಶಿಕ್ಷಣ ಪಡೆಯಲು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪರದಾಟ ನೀಗಿಸುವುದು. ನಿರುದ್ಯೋಗ ಸಮಸ್ಯೆ ಬಗ್ಗೆ ಮತದಾರರಲ್ಲಿ ತಿಳಿ ಹೇಳುತ್ತಾ ವಿಭಿನ್ನವಾಗಿ ಅಬ್ಬರವಿಲ್ಲದ ಗುರುಗಳ ಪ್ರಚಾರಕ್ಕೆ ವಿದ್ಯಾರ್ಥಿಗಳು ಸಾಥ್ ನೀಡಿದರು.

ಲೋಕೇಶ್‌ಗೆ ಭಾರತೀಯ ಯುವ ಚೈತನ್ಯ ಮತ್ತು ಅತಿಥಿ ಉಪನ್ಯಾಸಕರ ವೇದಿಕೆ ಬೆಂಬಲ ನೀಡಿದೆ. ಯುವ ಮತದಾರರ ಬೆಂಬಲದೊಂದಿಗೆ ಶಿಷ್ಯರ ಗುಂಪು ನಡೆಸುತ್ತಿರುವ ಕಾರ್ಯ ಚಟುವಟಿಕೆ ಉತ್ಸಾಹದಿಂದ ಕೂಡಿತ್ತು. ಮೊದಲ ಬಾರಿ ಮತದಾನ ಮಾಡಲು ಉತ್ಸುಕರಾದ ಈ ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷವನ್ನು ಒಪ್ಪದೆ ತಮ್ಮ ಗುರು ಪಿ.ಸಿ.ಲೋಕೇಶ್ ಅವರನ್ನು ಬೆಂಬಲಿಸಿ ಸ್ನೇಹಿತರ ಬಳಿ ದೇಣಿಗೆ ಎತ್ತಿ 30 ಸಾವಿರ ರೂಪಾಯಿಗಳನ್ನು ಪ್ರಚಾರ ಕಾರ್ಯಕ್ಕೆ ಬಳಸಿರುವುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.