ADVERTISEMENT

ಜಾತಿ ರೋಗ ಮೆಟ್ಟುವ ವಿವೇಕ ಬೆಳೆಯಲಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 10:16 IST
Last Updated 4 ಜುಲೈ 2013, 10:16 IST

ತಿಪಟೂರು: ಬೆಂಬಿಡದೆ ಕಾಡುತ್ತಿರುವ ಜಾತಿಯ ರೋಗವನ್ನು ಮೆಟ್ಟಿ ವಿಶಾಲತೆ ತೋರುವವರು ಮಾತ್ರ ಈ ರಾಷ್ಟ್ರದ ನಿಜವಾದ ಸ್ವತ್ತಾಗುತ್ತಾರೆ ಎಂದು ವೀರಶೈವ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರಕ್ಕೆ ಬುಧವಾರ ಸ್ವಾಮಿ ವಿವೇಕಾನಂದ ರಥಯಾತ್ರೆ ಆಗಮಿಸಿದ ಸಂದರ್ಭ ಕಲ್ಪತರು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆದ ಯುವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಸಂಕುಚಿತತೆ ದೇಶದಲ್ಲಿ ಹಲವುರು ಸಮಸ್ಯೆ ತಂದೊಡ್ಡಿದೆ. ಜಾತಿಯೆಂಬ ದೊಡ್ಡ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಗುಣ ಎಲ್ಲರಲ್ಲಿ ಬೆಳೆಯಬೇಕು. ವಿವೇಕಾನಂದರು ಇಂಥ ಜಾತ್ಯತೀತ ಸ್ವಸ್ಥ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂದರು.

ತುಮಕೂರು ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಮಾಜಿ ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು.

ರಾಮಕೃಷ್ಣ ಮಠದ ತ್ಯಾಗೀಶ್ವರಾನಂದ ಸ್ವಾಮೀಜಿ, ಸೌಖ್ಯನಂದ ಸ್ವಾಮೀಜಿ, ಬೆಂಗಳೂರು ಗಾಂಧಿ ಭವನದ ಕಾರ್ಯದರ್ಶಿ ಶಿವರಾಜು, ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಕೆ.ತಿಪ್ಪೇರುದ್ರಪ್ಪ, ಖಜಾಂಚಿ ವಿಶ್ವನಾಥ್, ಕೆಐಟಿ ಪ್ರಾಂಶುಪಾಲ ಶಶಿಧರ್, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಪಾಂಶುಪಾಲ ರಂಗನಾಥ್, ಗುರುಕುಲಾನಂದಶ್ರಮ ಸಿಇಒ ಹರಿಪ್ರಸಾದ್ ಮತ್ತಿತರರು ಇದ್ದರು.

ಭವ್ಯ ಮೆರವಣಿಗೆ: ನಗರದಲ್ಲಿ ಸ್ವಾಮಿ ವಿವೇಕಾನಂದರ ರಥಯಾತ್ರೆಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ತುಂತುರು ಮಳೆ ನಡುವೆಯೂ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.