ADVERTISEMENT

ದೇಸಿ ಸಾಧಕರು: ಜನಪದಕ್ಕೆ ಗೆಜ್ಜೆಯ ಸಿರಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 8:35 IST
Last Updated 21 ಏಪ್ರಿಲ್ 2012, 8:35 IST

ಜನಪದ ಕಲೆಗಳ ಅಧ್ಯಯನ, ಪ್ರದರ್ಶನ, ಸಂಶೋದನೆ, ತರಬೇತಿ....
-ಹೀಗೆ ಜನಪದ ಕಲೆಗಳ ಉಳಿವಿಗಾಗಿ ಮಧುಗಿರಿ ತಾಲ್ಲೂಕಿನ ಶಿಕ್ಷಕರಾದ ಕಸಾಪುರ ರಾಮಚಂದ್ರಯ್ಯ, ನೀರಕಲ್ಲು ಎಚ್.ಡಿ. ನರಸೇಗೌಡ, ಕತ್ತಿರಾಜನಹಳ್ಳಿ ಕೆ.ಅರ್. ರಾಮಚಂದ್ರಯ್ಯ, ಕೊರಟಗೆರೆ ಓ.ರಾಮಕೃಷ್ಣ, ಎಚ್.ಕೆ.ರಂಗನಾಥ ಮುಂದಾಗಿದ್ದಾರೆ.

1997ರಲ್ಲಿ ಆಸಕ್ತ ಸಮಾನ ಮನಸ್ಕ ಶಿಕ್ಷಕರು ಒಂದುಗೂಡಿ ಜನಪದ ಸಿರಿಗೆಜ್ಜೆ ಹವ್ಯಾಸಿ ಕಲಾ ತಂಡ ಕಟ್ಟಿಕೊಂಡು ಪ್ರಾಥಮಿಕ ಹಂತದಿಂದ ಪದವಿವರೆಗಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ವೀರಗಾಸೆ, ನಂದಿಕೋಲು ಕುಣಿತ, ಕರಗ ನೃತ್ಯ, ಕಳಸ ನೃತ್ಯ, ಶಿವತಾಂಡವ ನೃತ್ಯ, ಸುಗ್ಗಿ ಕುಣಿತ, ಭಜನೆ, ಕೋಲಾಟ, ಬಯಲಾಟ, ತಮಟೆ ವಾದ್ಯ, ಸೋಬಾನೆ, ಗೀಗೀಪದ ಮುಂತಾದ 30ಕ್ಕೂ ಹೆಚ್ಚು ಕಲಾ ಪ್ರಕಾರಗಳಲ್ಲಿ ತರಬೇತಿ ನೀಡಿ ಉತ್ತಮ ಕಲಾ ತಂಡವನ್ನು ನಿರ್ಮಿಸಿದ್ದಾರೆ.

200 ಮಂದಿ ಕಲಾವಿದರಿಗೆ ಬೇಕಾದ ವೇಷ ಭೂಷಣ, ಉಡುಗೆ ಹಾಗೂ ವಾದ್ಯಗಳನ್ನು ಸಂಗ್ರಹಿಸಿದ್ದಾರೆ. ಜಿಲ್ಲೆ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಹಳ್ಳಿ- ಪಟ್ಟಣ ಎನ್ನದೆ ಮೆರವಣೆಗೆ, ಉತ್ಸವ, ರಾಷ್ಟ್ರೀಯ ಹಬ್ಬ, ಶಾಲಾ- ಕಾಲೇಜು ಹಾಗೂ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಕಲಾ ಪ್ರದರ್ಶನ ನೀಡುತ್ತಿದ್ದಾರೆ.

`ಜನಪದ ಕಲೆಗಳಲ್ಲಿ ಆಸಕ್ತಿ ಇದ್ದ ನಾವು ಕಲಾ ಪ್ರಕಾರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆವು. ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಿನಾಶದ ಅಂಚಿಗೆ ಸರಿಯುತ್ತಿರುವ ದೇಸಿ ಕಲೆಗಳ ಉಳಿವಿಗೆ ವಿದ್ಯಾರ್ಥಿ ಪಡೆಯನ್ನು ಬಳಸಿಕೊಂಡು ಕಾಯಕಲ್ಪ ಮಾಡಬಹುದೆಂದು ಕಾರ್ಯಪ್ರವೃತ್ತ ರಾಗಿದ್ದೇವೆ~ ಎಂದು ರಾಮಚಂದ್ರಯ್ಯ ಹೇಳಿದರು.

ತಂಡದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು ಇದ್ದಾರೆ. ಕಲಾ ಪ್ರದರ್ಶನದಿಂದ ಬಂದ ಸಂಭಾವನೆಯನ್ನು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಂಚಲಾಗು ವುದು. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿದೆ.

ಕೆಲವರು ಇದನ್ನು ವೃತ್ತಿ ಮತ್ತು ಪ್ರವೃತ್ತಿಯಾಗಿ ಸ್ವೀಕರಿಸಿದ್ದಾರೆ. ವಿದ್ಯಾರ್ಥಿ ಗಳು ದುಶ್ಚಟಗಳಿಂದ ದೂರವಾಗಿ ಉತ್ತಮ ಹವ್ಯಾಸ ಬೆಳೆಸುವಲ್ಲಿ ಜನಪದ ಕಲೆ ಮತ್ತು ಕಲಾ ತಂಡ ಸಹಕಾರಿಯಾಗಿದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.