ADVERTISEMENT

ಪುನಶ್ಚೇತನಗೊಂಡ ಕೆರೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 5:39 IST
Last Updated 29 ನವೆಂಬರ್ 2017, 5:39 IST

ಹಾಗಲವಾಡಿ: ‘ಕೆರೆಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕಾನೂನಿದ್ದರೂ, ಒತ್ತುವರಿಯನ್ನು ತಡೆಯುವುದು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಸಂಸದ ಮುದ್ದಹನುಮೇಗೌಡ ವಿಷಾದ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಹರಳಕಟ್ಟೆ ಮತ್ತು ಹಾಗಲವಾಡಿ ಗ್ರಾಮ ಪಂಚಾಯಿತಿ ಸಹಭಾಗಿತ್ವದೊಂದಿಗೆ ಪುನಶ್ಚೇತನಗೊಂಡ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭೂಮಿ ಜನರ ಅವಶ್ಯಕತೆಯನ್ನು ನೀಗಿಸುತ್ತದೆ ಹೊರತು, ಅತಿಯಾಸೆಯನ್ನ ಪೂರೈಸುವಷ್ಟು ಶಕ್ತಿ ಇಲ್ಲ ಎಂದು ಗಾಂಧೀಜಿಯವರು ಹೇಳಿದ್ದರು. ಮನುಷ್ಯನ ಆಸೆಗೆ ನೀರು, ವನಸಂಪತ್ತು, ಪ್ರಾಣಿಸಂಕುಲವೇ ನಾಶವಾಗುತ್ತಿದೆ’ ಎಂದರು.

ADVERTISEMENT

ಶಾಸಕ ಶ್ರೀನಿವಾಸ್ ಮಾತನಾಡಿ, ‘ನೂರಾರು ದೇವಾಲಯಗಳ ಅಭಿವೃದ್ಧಿ ಹೆಸರಲ್ಲಿ ಹಣ ಪೋಲು ಮಾಡುವಬದಲು, ಇಂತಹ ಒಂದು ಕೆರೆ ಕಟ್ಟಲು ಸಹಕರಿಸಿದರೆ ರೈತನಬಾಳು ಸುಂದರವಾಗುವುದು. ಕುಡಿಯುವ ನೀರಿಗಾಗಿ ಪರದಾಡುವಂತಹ ಸಂದರ್ಭದಲ್ಲಿ, ಕೆರೆಗಳ ಪುನಶ್ಚೇತನ ಕಾರ್ಯ ಮಾಡಿದರೆ ಕುಡಿಯುವ ನೀರಿ ಬರ ಇಲ್ಲದಂತೆ ಮಾಡಬಹುದು, ಇಂತಹ ಕಾರ್ಯಕ್ಕೆ ಚಾಲನೆ ನೀಡಿದ ಸಂಸ್ಥೆಗೆ ಅಭಿನಂದನೆ ಎಂದರು.

ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಧರ್ಮಸ್ಥಳ ಪ್ರಾದೇಶಿಕ ಸಂಸ್ಥೆಯ ನಿರ್ದೇಶಕ ಆನಂದ್ ಸುವರ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ರಾಮಾಂಜನೇಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಯೋಗೀಶ್, ಗುಬ್ಬಿ ಸಿಪಿಐ ರಂಗಸ್ವಾಮಿ, ಎಪಿಎಂಸಿ ಉಪಾಧ್ಯಕ್ಷ ನಾಗರಾಜು, ಬಗರ್ ಹುಕುಂ ಸಮಿತಿ ಸದಸ್ಯ ಸಣ್ಣರಂಗಯ್ಯ, ಮುಖಂಡರಾದ ಶಿವಲಿಂಗಯ್ಯ, ಉಮೇಶ್, ಉದಯ್, ಕೃಷ್ಣಮೂರ್ತಿ, ಜನಾರ್ದನ್, ಯೋಜನಾಧಿಕಾರಿ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.