ADVERTISEMENT

ಪೆಟ್ಟಿಗೆ ಅಂಗಡಿಗೆ ಆಕಸ್ಮಿಕ ಬೆಂಕಿ: ಮಾಲೀಕನಿಗೆ ತೀವ್ರ ಗಾಯ   

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:20 IST
Last Updated 10 ಜೂನ್ 2025, 14:20 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪಾವಗಡ: ಆಕಸ್ಮಿಕ ಬೆಂಕಿ ತಗುಲಿ ತಾಲ್ಲೂಕಿನ ಸುಂಕಾರ್ಲಹಳ್ಳಿಯಲ್ಲಿ ಸೋಮವಾರ ರಾತ್ರಿ ಅಂಗಡಿಯೊಂದು ಸಂಪೂರ್ಣ ಸುಟ್ಟು ಅಂಗಡಿ ಮಾಲೀಕ ನಾರಾಯಣಪ್ಪ (50) ಅವರಿಗೆ ತೀವ್ರ ಗಾಯಗಳಾಗಿವೆ.

ಆಕಸ್ಮಿಕ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ಪೆಟ್ರೋಲ್‌ನಿಂದಾಗಿ ಬೆಂಕಿ ವೇಗವಾಗಿ ವ್ಯಾಪಿಸಿ ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಂಗಡಿಯಲ್ಲಿದ್ದ ನಾರಾಯಣಪ್ಪ ಅವರ ಕೈ, ಕಾಲು, ದೇಹದ ವಿವಿಧೆಡೆ ಸುಟ್ಟ ಗಾಯಗಳಾಗಿವೆ.

ADVERTISEMENT

ಗಾಯಾಳುವನ್ನು ಗ್ರಾಮಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.