ತುರುವೇಕೆರೆ: ತಾಲ್ಲೂಕಿನ ಅಬಲಕಟ್ಟೆ ಗ್ರಾಮದ ಎಂ.ಟಿ ಭವ್ಯ ಬಸವರಾಜು ಅವರು ಮುಂಬೈ ಜಿಯೋ ವರ್ಡ್ ಸೆಂಟರ್‌ನಲ್ಲಿ ನಡೆದ ವೇವ್ಸ್ 2025 ವಿಶ್ವ ಆಡಿಯೋ ವಿಶುವಲ್ ಮತ್ತು ಮನರಂಜನ ಶೃಂಗಸಭೆಗೆ ಆಯ್ಕೆಯಾಗಿದ್ದಾರೆ.
ಎಂ.ಟಿ ಭವ್ಯ ಬಸವರಾಜು ಶೃಂಗಸಭೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡೋನ್ ಕಂಟೆಂಟ್ ಕ್ರಿಯೇಟರ್‌ಗಳ ವಿಭಾಗದಲ್ಲಿ ಭಾರತದಿಂದ ಭಾಗವಹಿಸಿ 2ನೇ ಸ್ಥಾನ ಪಡೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಮುಖ ತಾರೆಯರು ಜಗತ್ತಿನ ಜಾಗತಿಕ ನಾಯಕರು ಭಾಗಿಯಾಗಿದ್ದು, ನಾಲ್ಕು ದಿನಗಳ ಈ ಕಾರ್ಯಕ್ರಮಗಳಲ್ಲಿ ಮನರಂಜನಾ ಉದ್ಯಮದ ಇತರ ಅನೇಕ ಪ್ರಭಾವಿ ವ್ಯಕ್ತಿಗಳೊಂದಿಗೆ ಚಲನಚಿತ್ರ ಮತ್ತು ಡಿಜಿಟಲ್ ವಿಷಯದ ಭವಿಷ್ಯದ ಕುರಿತು ಪ್ರಮುಖ ಚರ್ಚೆಗಳು ನಡೆದವು.
2029 ರ ವೇಳೆಗೆ 50 ದಶಕೋಟಿ ಡಾಲರ್ ಮೌಲ್ಯದ ಮಾರುಕಟ್ಟೆಯನ್ನು ತೆರೆಯುವ ಗುರಿಯನ್ನು ಹೊಂದಿರುವ ಈ ಶೃಂಗ ಸಭೆಯು ಜಾಗತಿಕ ಮನರಂಜನಾ ಆರ್ಥಿಕತೆಯಲ್ಲಿ ಭಾರತದ ಹೆಜ್ಜೆ ಗುರುತನ್ನು ವಿಸ್ತರಿಸುವ ಗುರಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.