ADVERTISEMENT

ತುಮಕೂರು: ಪಿ.ಚಂದ್ರಿಕಾ, ಗೋವಿಂದರಾಜು ಎಂ.ಕಲ್ಲೂರುಗೆ ವೀಚಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:38 IST
Last Updated 31 ಮೇ 2025, 14:38 IST
ಪಿ.ಚಂದ್ರಿಕಾ
ಪಿ.ಚಂದ್ರಿಕಾ   

ತುಮಕೂರು: ವೀಚಿ (ವೀ.ಚಿಕ್ಕವೀರಯ್ಯ) ಸಾಹಿತ್ಯ ಪ್ರತಿಷ್ಠಾನ ಕೊಡ ಮಾಡುವ 2024ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಪಿ.ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಆಯ್ಕೆ ಆಗಿದೆ.

‘ವೀಚಿ ಯುವ ಸಾಹಿತ್ಯ’ ಪ್ರಶಸ್ತಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಗೋವಿಂದರಾಜು ಎಂ.ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾ ಸಂಕಲನವನ್ನು ಆಯ್ಕೆ ಮಾಡಲಾಗಿದೆ.

ವೀಚಿ ಸಾಹಿತ್ಯ ಪ್ರಶಸ್ತಿಯು ₹25ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ವೀಚಿ ಯುವ ಸಾಹಿತ್ಯ ಪ್ರಶಸ್ತಿಯು ₹5ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

ADVERTISEMENT

ಕಥೆಗಾರ ತುಂಬಾಡಿ ರಾಮಯ್ಯ, ರಂಗಕರ್ಮಿ ಬೇಲೂರು ರಘುನಂದನ್, ಕವಿ ಟಿ.ಯಲ್ಲಪ್ಪ ನೇತೃತ್ವದ ಆಯ್ಕೆ ಸಮಿತಿಯು ಪ್ರಶಸ್ತಿಗೆ ಬಂದಿದ್ದ 180 ಕೃತಿಗಳನ್ನು ಪರಿಶೀಲಿಸಿ, ಪ್ರಶಸ್ತಿಗಳನ್ನು ಪ್ರಕಟಿಸಿದೆ. ಜೂನ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವೀಚಿ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಂ.ಎಚ್.ನಾಗರಾಜು ತಿಳಿಸಿದ್ದಾರೆ.

ಗೋವಿಂದರಾಜು ಎಂ.ಕಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.