ADVERTISEMENT

ಗ್ರಾಮಗಳಲ್ಲಿ ದ್ವಿಚಕ್ರ ವಾಹನ ಜಪ್ತಿ

ಪೊಲೀಸರ ನಡೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 17:11 IST
Last Updated 31 ಮಾರ್ಚ್ 2020, 17:11 IST

ಕೋರ: ಕೊರೊನಾ ಕರ್ಫ್ಯೂ ಪರಿಣಾಮ ಹಳ್ಳಿಗಳಿಗೂ ಕಾಲಿಟ್ಟಿದ್ದು, ಹೋಬಳಿ ವ್ಯಾಪ್ತಿಯ ಬೆಳಧರ, ಹಿರೇತೊಟ್ಲಿಕೆರೆ, ಮೆಳೇಹಳ್ಳಿ ಗ್ರಾಮಗಳಿಗೆ ಮಂಗಳವಾರ ಕೋರ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನೀಡಿ ದ್ವಿಚಕ್ರ ವಾಹನ ಜಪ್ತಿ ಮಾಡಿದರು.

ಪೊಲೀಸರ ಈ ನಡೆಗೆ ಗ್ರಾಮಸ್ಥರು ಹಾಗೂ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ದಿಢೀರ್‌ ಹಳ್ಳಿಗಳಿಗೆ ಭೇಟಿ ನೀಡಿದ ಪಿಎಸ್ಐ ಗ್ರಾಮದಲ್ಲಿ ಅಲ್ಲಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳನ್ನು ಏಕಾಏಕಿ ಜಪ್ತಿ ಮಾಡಿದ್ದಾರೆ. ವಾಹನ ಮಾಲೀಕರು ಹಾಗೂ ಕೆಲ ರೈತರು ಪ್ರಶ್ನೆ ಮಾಡಿದಾಗ ಕರ್ಫ್ಯೂ ಜಾರಿಯಲ್ಲಿದೆ. ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಈ ಭಾಗದಲ್ಲಿ ಕರಡಿ ಹಾಗೂ ಚಿರತೆ ಹಾವಳಿ ಹೆಚ್ಚಾಗಿದೆ. ವಿದ್ಯುತ್ ಅಭಾವ ತೀವ್ರವಾಗಿದೆ. ರೈತರು ತಮ್ಮ ಜಮೀನಿಗೆ ತೆರಳಲು ಬೈಕ್‌ ಅವಲಂಬಿಸಿದ್ದು, ಈಗ ಪೊಲೀಸರು ವಾಹನ ಜಪ್ತಿ ಮಾಡಿರು ವುದರಿಂದ ರೈತರು ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.