ADVERTISEMENT

ದಸರಾಗೆ ಮೆರುಗು ತಂದ ದೇವರ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 3:02 IST
Last Updated 16 ಅಕ್ಟೋಬರ್ 2021, 3:02 IST
ತುಮಕೂರು ಬಿಜಿಎಸ್ ವೃತ್ತದಲ್ಲಿ ದೇವರ ಉತ್ಸವಕ್ಕೆ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್ ಮತ್ತಿತರರು ಭಾಗವಹಿಸಿದ್ದರು
ತುಮಕೂರು ಬಿಜಿಎಸ್ ವೃತ್ತದಲ್ಲಿ ದೇವರ ಉತ್ಸವಕ್ಕೆ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್ ಮತ್ತಿತರರು ಭಾಗವಹಿಸಿದ್ದರು   

ತುಮಕೂರು: ವಿಜಯದಶಮಿಯಂದು ಮೈಸೂರಿನಲ್ಲಿ ಜಂಬೂ ಸವಾರಿಯ ಮೆರವಣಿಗೆ ನಡೆದರೆ, ನಗರದಲ್ಲಿ ದೇವರ ಉತ್ಸವದ ಮೆರವಣಿಗೆಯು ದಸರಾ ಆಚರಣೆಗೆ ರಂಗೇರಿಸಿತ್ತು.

ದಸರಾ ಉತ್ಸವ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಡೆದ ವಿವಿಧ ದೇವರುಗಳ ಸಾಮೂಹಿಕ ಮೆರವಣಿಗೆ ದಸರಾ ಆಚರಣೆಗೆ ರಂಗು ತುಂಬಿತ್ತು. ದೇವರ ಮೆರವಣಿಗೆ ಜತೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಕಲಾವಿದರು ಹೆಜ್ಜೆ ಹಾಕಿ ಮತ್ತಷ್ಟು ಮೆರುಗು ತಂದರು. ಅತ್ಯಂತ ವಿಜೃಂಭಣೆಯಿಂದ ದಸರಾ ಮೆರವಣಿಗೆ ನೆರವೇರಿತು.

ನಗರದ ಬಿಜಿಎಸ್ ವೃತ್ತದಲ್ಲಿ ಬೆಂಗ
ಳೂರು ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೂಜೆ ಸಲ್ಲಿಸುವುದ
ರೊಂದಿಗೆ ದೇವರ ಉತ್ಸವಕ್ಕೆ ಚಾಲನೆ ನೀಡಿದರು. ಟ್ರ್ಯಾಕ್ಟರ್‌ಗಳ ಮೇಲೆ ಕುಳಿತು ಹೊರಟ ದೇವರ ಮೂರ್ತಿಗಳ ಮೆರವಣಿಗೆಯು ಎಂ.ಜಿ.ರಸ್ತೆ, ಗುಂಚಿ ವೃತ್ತ, ಹೊರಪೇಟೆ, ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಸಾಗಿ ಸಾಮೂಹಿಕ ಶಮೀ
ಪೂಜೆ ನಡೆದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ತಲುಪಿತು.

ADVERTISEMENT

ವಿಶೇಷವಾಗಿ ಹೂವಿನಿಂದ ಅಲಂಕರಿಸಿದ್ದ ದೇವರುಗಳ ಮೆರವಣಿಗೆ
ಯುದ್ದಕ್ಕೂ ಸಾಂಸ್ಕೃತಿಕ ಕಲಾ ತಂಡಗಳು ಹೆಜ್ಜೆ ಹಾಕಿದವು. ಕಲಾ ತಂಡಗಳು ನೀಡುತ್ತಿದ್ದ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು. ವಾದ್ಯಗೋಷ್ಠಿಯು ಮೆರವಣಿಗೆಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ರಸ್ತೆಯ ಇಕ್ಕೆಲಗ
ಳಲ್ಲಿ ನಿಂತ ಜನರು ಮೆರವಣಿಗೆ ವೀಕ್ಷಿಸಿ, ಪೂಜೆ ಸಲ್ಲಿಸಿ ಪುನೀತರಾದರು. ಮೆರ
ವಣಿಗೆಯಲ್ಲಿ ಸಾರ್ವಜನಿಕರು ಹೆಜ್ಜೆ ಹಾಕಿದರು.

ಬಿ.ಎಚ್‌.ರಸ್ತೆ ಗಣಪತಿ ದೇವಸ್ಥಾನ, ರಾಮಮಂದಿರ, ಬಿದುರುಮಳೆ ತೋಟದ ಮಹಾವಿಷ್ಣು ದೇವಾಲಯ, ಅರಳೇಪೇಟೆ ಚಿನಿವಾರಕಟ್ಟೆ ಬಸವೇಶ್ವರ ದೇವಸ್ಥಾನ, ಅರಳೆಪೇಟೆ ಜಗದ್ಗುರು ರೇಣುಕಾಚಾರ್ಯ, ಕೋಟೆ ಮುದ್ದು ಬಸವೇಶ್ವರ, ಹೊರಪೇಟೆ ಸುಂಕದಕಟ್ಟೆ ಬಸವೇಶ್ವರ, ಬೆಣ್ಣೆ ಬಸವೇಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ವೀರಭದ್ರಸ್ವಾಮಿ, ಕಾಶಿ ವಿಶ್ವನಾಥ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ, ಗವಿಗಂಗಾಧರೇಶ್ವರ ಸ್ವಾಮಿ, ಕನ್ನಿಕಾ ಪರಮೇಶ್ವರಿ, ವಿಶ್ವಕರ್ಮ ಕಾಳಿಕಾಂಬ ದೇವಾಲಯ ಸೇರಿದಂತೆ ಹತ್ತಾರು ದೇವರ ಮೂರ್ತಿಗಳ ಮೆರವಣಿಗೆ ನಡೆಯಿತು.

ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದ ನಂತರ ಮಾತನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಎಸ್‌.ಪಿ.
ಚಿದಾನಂದ್, ‘ಈ ಬಾರಿ ವಿಜಯದಶಮಿ ಮೆರವಣಿಗೆ ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು, ಕೋವಿಡ್‌ನಿಂದಾಗಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಕಲಾ ತಂಡಗಳ ಸದಸ್ಯರು ಸೇರಿದಂತೆ ಭಕ್ತಾದಿಗಳಿಗೆ ಸಮಿತಿ ವತಿಯಿಂದ ಮಾಸ್ಕ್ ನೀಡಲಾಗಿದೆ’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ದಸರಾ ಸಮಿತಿ ಗೌರವಾಧ್ಯಕ್ಷ ಸಿ.ವಿ.ಮಹದೇವಯ್ಯ, ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಪ್ರಮುಖರಾದ ಬಿ.ಎಸ್.ಮಹೇಶ್, ಚೇತನ್, ಎಚ್.ಕೆ.ಬಸವರಾಜು, ಕೆ.ಎನ್.ಗೋವಿಂದರಾವ್, ಬಸವರಾಜು, ಮಲ್ಲಿಕಾರ್ಜುನ್, ವಿಶ್ವನಾಥ್, ಟಿ.ಎಸ್.ಸದಾಶಿವಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.