ADVERTISEMENT

ನೋಂದಣಿಗೆ ಮುಗಿಬಿದ್ದ ರೈತರು

ಪೊಲೀಸ್‌ ಬಂದೋಬಸ್ತ್‌ನಲ್ಲಿ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 4:00 IST
Last Updated 12 ಜನವರಿ 2021, 4:00 IST
ತಿಪಟೂರು ಎಪಿಎಂಸಿ ಆವರಣದಲ್ಲಿ ತೆರದಿರುವ ರಾಗಿ ಖರೀದಿ ಕೇಂದ್ರದ ಬಳಿ ಸರದಿ ಸಾಲಿನಲ್ಲಿ ನಿಂತಿರುವ ರೈತರು
ತಿಪಟೂರು ಎಪಿಎಂಸಿ ಆವರಣದಲ್ಲಿ ತೆರದಿರುವ ರಾಗಿ ಖರೀದಿ ಕೇಂದ್ರದ ಬಳಿ ಸರದಿ ಸಾಲಿನಲ್ಲಿ ನಿಂತಿರುವ ರೈತರು   

ತಿಪಟೂರು: ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿಗೆ ನೋಂದಣಿ ಪ್ರಾರಂಭವಾಗಿದ್ದು ನೂರಾರು ಸಂಖ್ಯೆಯಲ್ಲಿ ಜಮಾಯಿ
ಸಿದ ರೈತರು ನೋಂದಣಿ ಮಾಡಲಾಗದೆಹಿಂದಿರುಗಿದರು.

2020-21ನೇ ಸಾಲಿನಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಸಲು ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಮೊದಲ ದಿನವೇ ಐನೂರಕ್ಕೂ ಹೆಚ್ಚು ರೈತರು ಆಗಮಿಸಿದ್ದು ನೋಂದಣಿ ಮಾಡಲು ಸಾಧ್ಯವಾಗದೇ
ಅನೇಕರು ಹಿಂದಿರುಗಿ ಹೋಗಿದ್ದಾರೆ. ನೋಂದಣಿ ಕೇಂದ್ರದಲ್ಲಿ ಕೇವಲ ಒಂದು ಕಂಪ್ಯೂಟರ್, ಇಬ್ಬರು ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪೊಲೀಸ್‌ ಬಂದೋಬಸ್ತ್‌ನಲ್ಲಿ ನೋಂದಣಿ ಮಾಡಲಾಯಿತು.

ಕ್ವಿಂಟಲ್ ರಾಗಿಗೆ ₹3,295 ನಿಗದಿಯಾಗಿದೆ. ಕರ್ನಾಟಕ ಆಹಾರ ಮತ್ತುನಾಗರಿಕ ಸರಬರಾಜು ನಿ. ತುಮಕೂರು ಇವರಿಂದ ಖರೀದಿಗೆ ನೋಂದಣಿಯನ್ನು ಪ್ರಾರಂಭಿಸಿದ್ದಾರೆ. ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ರೈತರು
ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.