ತುಮಕೂರು: ಪಿ.ಎಂ ಕುಸುಮಾ ಯೋಜನೆ ಅಡಿಯಲ್ಲಿ ರೈತರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಯೂಟೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ ಜಾಹೀರಾತು ನೀಡಿ ಪಿ.ಎಂ ಕುಸುಮಾ ಯೋಜನೆ ಅಡಿಯಲ್ಲಿ ಸಬ್ ಮರ್ಸಿಬಲ್ ಸೋಲಾರ್ ಪಂಪ್ ಅಳವಡಿಸಿಕೊಡುವುದಾಗಿ ಹೇಳಲಾಗುತ್ತಿದೆ. ಕರೆಮಾಡಿ ರೈತರಿಂದ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿಸಿಕೊಳ್ಳುತ್ತಾರೆ.
ನಂತರ ಒಪ್ಪಂದ ಪತ್ರ, ಸಾಗಣೆ ವೆಚ್ಚ, ತೆರಿಗೆ ಹಣವೆಂದು ನೆಟ್ ಬ್ಯಾಂಕಿಂಗ್ ಮೂಲಕ ಪಡೆದುಕೊಳ್ಳುತ್ತಾರೆ. ಈ ಹಣವನ್ನು ಸಬ್ಸಿಡಿ ಹಣದೊಂದಿಗೆ ಹಿಂತಿರುಗಿಸುವ ಭರವಸೆ ನೀಡಿ ಮೋಸ ಮಾಡುತ್ತಿದ್ದಾರೆ. ಇವರು ಅಂತರ್ಜಾಲ ವಂಚಕರಾಗಿದ್ದು ಅವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಲಕ್ಷಾಂತರ ರೂಪಾಯಿ ಮೋಸ ಮಾಡುತ್ತಿದ್ದಾರೆ. ಇವರು ಬಿಹಾರ್, ಜಾರ್ಖಾಂಡ್, ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ ರಾಜ್ಯದವರಾಗಿದ್ದಾರೆ. ಬೆಂಗಳೂರಿನಲ್ಲೇ ಇರುತ್ತೇವೆಂದು ನಂಬಿಸಿ ವಂಚನೆ ಮಾಡುತ್ತಿದ್ದಾರೆ.
ಹರಿಕೃಷ್ಣ ಎಂಬುವರಿಂದ ₹6.41 ಲಕ್ಷ ಹಾಗೂ ಮತ್ತೊಂದು ಪ್ರಕರಣದಲ್ಲಿ ₹18.37 ಲಕ್ಷ ವಂಚಿಸಲಾಗಿದೆ. ಈ ಸಂಬಂಧ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.