ADVERTISEMENT

ಧಾರ್ಮಿಕ ಜಾಗೃತಿ ಮೂಡಿಸಿದ ಗೋಂದಾವಲೇಕರ್‌

ಶೃಂಗೇರಿ ಶಂಕರ ಮಠದಲ್ಲಿ ನಡೆದ ಆರಾಧನಾ ಮಹೋತ್ಸವದಲ್ಲಿ ಡಾ.ಪಿ.ಆರ್‌.ರೇಣುಕ ಪ್ರಸಾದ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 16:39 IST
Last Updated 5 ಜನವರಿ 2019, 16:39 IST
ಆರಾಧನಾ ಮಹೋತ್ಸವದಲ್ಲಿ ಡಾ.ಪಿ.ಆರ್.ರೇಣುಕ ಪ್ರಸಾದ್ ಅವರನ್ನು ಟ್ರಸ್ಟ್ ಅಧ್ಯಕ್ಷ ಎಚ್.ಕೆ. ಶ್ರೀನಿವಾಸಶರ್ಮಾ ಸನ್ಮಾನಿಸಿದರು
ಆರಾಧನಾ ಮಹೋತ್ಸವದಲ್ಲಿ ಡಾ.ಪಿ.ಆರ್.ರೇಣುಕ ಪ್ರಸಾದ್ ಅವರನ್ನು ಟ್ರಸ್ಟ್ ಅಧ್ಯಕ್ಷ ಎಚ್.ಕೆ. ಶ್ರೀನಿವಾಸಶರ್ಮಾ ಸನ್ಮಾನಿಸಿದರು   

ತುಮಕೂರು: ರಾಮೋಪಾಸನೆ, ನಾಮಸ್ಮರಣೆ, ಗೋರಕ್ಷೆ ಮತ್ತು ಅನ್ನದಾನ ಸಂಗತಿಗಳ ಮೂಲಕ ಬ್ರಹ್ಮಜ್ಞಾನಿಗಳಾದ ಬ್ರಹ್ಮಚೈತನ್ಯ ಮಹಾರಾಜ್‌ ಗೋಂದಾವಲೇಕರ್‌ ಅವರು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದರು ಎಂದು ಪ್ರಾಧ್ಯಾಪಕ ಡಾ.ಪಿ.ಆರ್‌.ರೇಣುಕ ಪ್ರಸಾದ್‌ ತಿಳಿಸಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಸಮರ್ಥ ಸದ್ಗುರು ಬ್ರಹ್ಮಚೈತನ್ಯ ಟ್ರಸ್ಟ್‌ನಿಂದ ಆಯೋಜಿಸಿದ್ದ ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೇಕರ್‌ ಅವರ 105 ನೇ ಆರಾಧನಾ ಮಹೋತ್ಸವ ಮತ್ತು ಸದ್ಗುರು ಬ್ರಹ್ಮಾನಂದ ಮಹಾರಾಜ್‌ ಅವರ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.

ಬ್ರಹ್ಮ ಎಂದರೆ ಸಕಲವನ್ನೂ ಒಳಗೊಂಡ ಅತಿದೊಡ್ಡ ವಸ್ತು. ಚೈತನ್ಯ ಎಂದರೆ ಚಲನಶಕ್ತಿಗೆ ಸಾಕ್ಷಿಭೂತವಾ
ದದ್ದು. ಅಂತಹ ಪ್ರಜ್ಞಾ ವಿಶೇಷವನ್ನು ಬ್ರಹ್ಮಚೈತನ್ಯರು ಹೊಂದಿದ್ದು, ಅವರು ನೀಡಿದ ಮಾರ್ಗದರ್ಶನವನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಆರ್.ನಾಗರಾಜರಾವ್, ಟ್ರಸ್ಟ್‌ ಅಧ್ಯಕ್ಷ ಎಚ್.ಕೆ.ಶ್ರೀನಿವಾಸ ಶರ್ಮ, ಶಂಕರ ಸೇವಾ ಸಮಿತಿ ಕಾರ್ಯದರ್ಶಿ ಸಂಪಿಗೆ ವೆಂಕಟನಾರಾಯಣ, ಸಂಗೀತ ವಿದ್ವಾನ್ ಬಾಲಕೃಷ್ಣ, ಪ್ರೊ.ಡಿ.ಕೆ.ಸುಬ್ರಹ್ಮಣ್ಯ, ಬಡಗನಾಡು ಸಂಘದ ಅಧ್ಯಕ್ಷ ಸೂರ್ಯನಾರಾಯಣ, ಮೀನಾಕ್ಷಿ ಹಾಗೂ ಶಾಮಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.