ಚಿರತೆ
(ಪ್ರಾತಿನಿಧಿಕ ಚಿತ್ರ)
ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಹಳೆಗುಬ್ಬಿ ಗ್ರಾಮದ ನರಸಯ್ಯ ಎಂಬುವರಿಗೆ ಸೇರಿದ ಮೇಕೆ ರೊಪ್ಪಕ್ಕೆ ಸೋಮವಾರ ಬೆಳಗಿನ ಜಾವ ಚಿರತೆ ನುಗ್ಗಿ ಮೇಕೆಯನ್ನು ಹೊತ್ತೊಯ್ದು ತಿಂದು ಹಾಕಿದೆ.
ಮನೆಯ ಮುಂದೆ ತೆಂಗಿನ ಗರಿಗಳಿಂದ ಕಟ್ಟಿದ್ದ ರೊಪ್ಪದಿಂದ ಮೇಕೆಯನ್ನು ಸಮೀಪದ ಪೊದೆಯೊಳಗೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ. ಬೆಳಿಗ್ಗೆ ರೊಪ್ಪಕ್ಕೆ ಹೋದಾಗ ದಾಳಿ ನಡೆಸಿರುವುದು ಗೊತ್ತಾಗಿ ಹುಡುಕಾಡಿದಾಗ ಸಮೀಪದಲ್ಲಿ ಚಿರತೆ ತಿಂದು ಬಿಟ್ಟಿದ್ದ ಮೇಕೆಯ ಕಳೆಬರ ದೊರೆತಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಅಧಿಕಾರಿಗಳು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಚಿರತೆ ಜನರ ಮೇಲೂ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಹೊಲ, ತೋಟಗಳಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.