ADVERTISEMENT

ತಿಪಟೂರು‌: 6,000 ಲೀಟರ್ ನೀರು ಸಾಮರ್ಥ್ಯದ ಜಲವಾಹನ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:26 IST
Last Updated 31 ಮೇ 2025, 14:26 IST
ತಿಪಟೂರು ಆಗ್ನಿಶಾಮಕ ಇಲಾಖೆಗೆ ನೂತನ ಜಲವಾಹನ ನೀಡಲಾಯಿತು
ತಿಪಟೂರು ಆಗ್ನಿಶಾಮಕ ಇಲಾಖೆಗೆ ನೂತನ ಜಲವಾಹನ ನೀಡಲಾಯಿತು   

ತಿಪಟೂರು‌: 6,000 ಲೀಟರ್ ನೀರು ಸಾಮರ್ಥ್ಯದ ಆಧುನಿಕ ತಂತ್ರಜ್ಞಾನವುಳ್ಳ ಜಲವಾಹನವನ್ನು ನಗರದ ಅಗ್ನಿಶಾಮಕ ದಳಕ್ಕೆ ಶನಿವಾರ ನೀಡಲಾಯಿತು.

ಆರು ತಿಂಗಳಿನಿಂದ ತಾಲ್ಲೂಕಿನಲ್ಲಿ ದೊಡ್ಡ ಸಾಮರ್ಥ್ಯದ ಜಲ ವಾಹನವಿಲ್ಲದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಫೆಬ್ರವರಿ 9ರಂದು ‘ತುರ್ತಾಗಿ ಬೇಕಿದೆ ಜಲವಾಹನ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು.

ಅವಘಡ ಸ್ಥಳಕ್ಕೆ ಚಿಕ್ಕ ವಾಹನದಲ್ಲಿ ತೆರಳಿದಾಗ ಸಾರ್ವಜನಿಕರು ಕೆಲಬಾರಿ ಟೀಕೆಗಳನ್ನು ಮಾಡಿ ಗೇಲಿ ಮಾಡುತ್ತಿದ್ದರು. ದೊಡ್ಡ ಅವಘಡಗಳು ಸಂಭವಿಸಿದಾಗ ಬೆಂಕಿ ನಂದಿಸಲು ಆಗುತ್ತಿಲ್ಲ ಎಂಬ ಕೊರಗಿತ್ತು. ಆದರೆ ಹೊಸ ವಾಹನ ಬಂದಿರುವುದರಿಂದ ಅನುಕೂಲವಾಗಿದೆ ಎಂದರು ಅಗ್ನಿಶಾಮಕ ದಳದ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.