ADVERTISEMENT

ಗರ್ಭಿಣಿಯ ಚಿಕಿತ್ಸೆಗೆ ನೆರವಾದ ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 16:51 IST
Last Updated 4 ಏಪ್ರಿಲ್ 2020, 16:51 IST
ವಿಶ್ವನಾಥ್
ವಿಶ್ವನಾಥ್   

ಕೊಡಿಗೇನಹಳ್ಳಿ(ಮಧುಗಿರಿ ತಾ.): ಲಾಕ್‌ಡೌನ್‌ ಪರಿಣಾಮ ವೈದ್ಯರು ಸಿಗದಿದ್ದಾಗ, ಹೋಬಳಿಯ ಅಕಲಾಕಪುರದ ನವೀನ್‌ ಅವರ ಗರ್ಭಿಣಿ ಪತ್ನಿಯನ್ನು ತಹಶೀಲ್ದಾರ್‌ ವಿಶ್ವನಾಥ್‌ ಅವರು ಸಕಾಲಕ್ಕೆ ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಗರ್ಭಿಣಿಗೆ ಈಚೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮಧುಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಹೆರಿಗೆ ಮಾಡಲು ಕೆಲ ಕಾರಣಗಳಿಂದ ಸಾಧ್ಯವಾಗದಿದ್ದಕ್ಕೆ ಅಲ್ಲಿಂದ ತುಮಕೂರಿಗೆ ಹೋಗಿದ್ದರು. ಅಲ್ಲಿ ಕೂಡ ವೈದ್ಯರು ಕಾರಣಗಳನ್ನು ಹೇಳಿ ಹೆರಿಗೆ ಮಾಡಲು ನಿರಾಕರಿಸಿದ್ದಾಗ ಮತ್ತೆ ಮಧುಗಿರಿಗೆ ವಾಪಸ್ಸಾಗಿದ್ದರು.

ನಡೆದ ಘಟನೆ ಬಗ್ಗೆ ಮಧುಗಿರಿ ವಿಶ್ವನಾಥ್ ಅವರ ಗಮನಕ್ಕೆ ತಂದರು. ಸಂಬಂಧಿಕರ ಒತ್ತಾಯದ ಮೇರೆಗೆ ಅವರೇ ತುಮಕೂರಿಗೆ ಆಸ್ಪತ್ರೆಗೆ ರಾತ್ರಿ 9 ಗಂಟೆಗೆ ಬಂದು ವೈದ್ಯಕೀಯ ಚಿಕಿತ್ಸೆ ಕೊಡಿಸಲು ನೆರವಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.