ಕೊಡಿಗೇನಹಳ್ಳಿ: ಹೋಬಳಿಯ ದೊಡ್ಡಮಾಲ್ಲೂರು ಗ್ರಾಮದಲ್ಲಿ 30 ವರ್ಷದಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಕೆಲವರಿಂದ ವಂಚನೆಯಾಗಿದೆ ಎಂದು ಆರೋಪಿಸಿ ದೊಡ್ಡಮಾಲೂರಿನ ಕೆಲವು ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದರು.
ರೈತ ಪಟೇಲ್ ಸಂಜೀವ್ ಗೌಡ ಮಾತನಾಡಿ, ದೊಡ್ಡಮಾಲ್ಲೂರು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಹಲವು ರೈತರ ಜಮೀನಿಗೆ ಕೆಲವರು ನಕಲಿ ದಾಖಲೆ ಸೃಷ್ಟಿಸಿಕೊಂಡು 16 ಏಕರೆ ಜಮೀನು ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರೈತ ನಟರಾಜು ಮಾತನಾಡಿ, ಈ ಭಾಗದ 500 ಏಕರೆ ಜಾಗದ ದಾಖಲೆ ಇಲ್ಲವೆಂದು ಕಂದಾಯ ಇಲಾಖೆ ಅಧಿಕಾರಿಗಳು ಕೆಲ ಸರ್ವೆ ನಂಬರ್‌ಗಳಿಗೆ ನಕಲಿ ದಾಖಲೆಗಳು ಸೃಷ್ಟಿಸಿ ಖಾತೆ ಪಹಣಿ ಮಾಡಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೆಂಕಟಪ್ಪ, ಗೋವಿಂದಪ್ಪ, ಅಂಜಿನಪ್ಪ, ಹನುಮಂತರಾಯ, ಲಿಂಗಪ್ಪ, ಕೃಷ್ಣಪ್ಪ, ಗೋಪಾಲ್, ಹರಿಪ್ರಸಾದ್, ರಾಮಾಂಜಿ, ರಾಮಕೃಷ್ಣಯ್ಯ, ಯಲ್ಲಪ್ಪ, ಅಂಜಪ್ಪ, ಸಂಜೀವಮೂರ್ತಿ, ಬಾಲು, ಬಲರಾಮು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.