ADVERTISEMENT

ತಹಶೀಲ್ದಾರ್ ವಸತಿಗೃಹದ ಜಾಗ ಸಂರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 7:26 IST
Last Updated 7 ಜೂನ್ 2025, 7:26 IST

ಕುಣಿಗಲ್: ಪಟ್ಟಣದ ಹೃದಯಭಾಗದಲ್ಲಿರುವ ತಹಶೀಲ್ದಾರ್ ವಸತಿಗೃಹದ ಜಾಗ ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ಪುರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಅವರು ತಹಶೀಲ್ದಾರ್ ಮತ್ತು ಶಾಸಕರಿಗೆ ಮನವಿ ಮಾಡಿದ್ದಾರೆ.

ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಕಸಬಾ ಗ್ರಾಮದಲ್ಲಿ 0.20 ಗುಂಟೆ ಜಮೀನು ತಹಶೀಲ್ದಾರ್ ವಸತಿಗೃಹದ ಹೆಸರಿನಲ್ಲಿದ್ದು, ಪಕ್ಕದ ಜಮೀನಿನವರು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಜಾಗದ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT