ADVERTISEMENT

ಕುಣಿಗಲ್: ಗಾಳಿಸುದ್ದಿಗೆ ಠಾಣೆಗೆ ಮುತ್ತಿಗೆ; ಲಾಠಿ ರುಚಿ ತೋರಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 5 ಮೇ 2025, 12:42 IST
Last Updated 5 ಮೇ 2025, 12:42 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಕುಣಿಗಲ್: ತಾಲ್ಲೂಕಿನ ಅಮೃತೂರು ಪಟ್ಟಲದಮ್ಮ ಜಾತ್ರಾ ಮಹೋತ್ಸವದಲ್ಲಿ ಯುವಕರ ನಡುವೆ ನಡೆದ ಕಿತ್ತಾಟದ ಬಗ್ಗೆ ಗಾಳಿ ಸುದ್ದಿ ಹಬ್ಬಿತ್ತು. ನಂತರ ಗ್ರಾಮಸ್ಥರ ತಂಡ ಕಾಲೊನಿಗೆ ನುಗ್ಗಲು ಯತ್ನಿಸಿ ನಂತರ ಪೊಲೀಸರ ವಶದಲ್ಲಿ ಯುವಕನನ್ನು ಒಪ್ಪಿಸಲು ಆಗ್ರಹಿಸಿ, ಭಾನುವಾರ ರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿ ರುಚಿ ತೋರಿಸಿ ಚದುರಿಸಿದರು.

ADVERTISEMENT

ಜಾತ್ರಾ ಸಮಯದಲ್ಲಿ (ಭಾನುವಾರ ಸಂಜೆ) ರಾಜಕೀಯ ಮುಖಂಡನ ಮಗನ ಮೇಲೆ ಕ್ಷುಲಕ ಕಾರಣಕ್ಕೆ ಜಾತ್ರೆಗೆಂದು ಬಂದಿದ್ದ ದಲಿತ ಯುವಕ ಛೇಡಿಸಿದ್ದು, ಅಸಮಾಧಾನಗೊಂಡ ಮುಖಂಡನ ಮಗ, ತಂದೆಗೆ ಕರೆಮಾಡಿ ವಿಷಯ ತಿಳಿಸಿದಾಗ ಮುಖಂಡ ಮತ್ತು ಬೆಂಬಲಿಗರು ಬಂದು ಯುವಕನನ್ನು ಥಳಿಸಿದ್ದರು.

ರಾತ್ರಿಯಾಗುತ್ತಿದ್ದಂತೆ ಯುವಕ, ಮುಖಂಡನ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ವದಂತಿ ಹಬ್ಬಿತು. ಸುಮಾರು ಆರು ನೂರಕ್ಕೂ ಹೆಚ್ಚಿನ ಗ್ರಾಮಸ್ಥರ ತಂಡ ಯುವಕನ ಕಾಲೊನಿಗೆ ನುಗ್ಗಲು ಯತ್ನಿಸಿದೆ. ಪೊಲೀಸರ ಸಮಯಪ್ರಜ್ಞೆಯಿಂದ ಯುವಕನನ್ನು ವಿಚಾರಣೆಗೆ ಠಾಣೆಗೆ ಕರೆತರಲಾಗಿದ್ದು, ಗ್ರಾಮಸ್ಥರ ತಂಡ ಠಾಣೆಗೆ ಮುತ್ತಿಗೆ ಹಾಕಿ ಯುವಕನನ್ನು ವಶಕ್ಕೆ ನೀಡಲು ಆಗ್ರಹಿಸಿದ್ದಾರೆ. ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದೆ.

ಡಿವೈಎಸ್ಪಿ ಓಂ ಪ್ರಕಾಶ್, ಸಿಪಿಐ ಮಾದ್ಯಾ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ರಾಜಕೀಯ ಮುಖಂಡರ ನೇತೃತ್ವದಲ್ಲಿ ವಿಚಾರಣೆ ನಡೆಸಿ ರಾಜಿ ಸಂಧಾನದ ಮೂಲಕ ಗೊಂದಲಕ್ಕೆ ತೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.