ಸಾಂದರ್ಭಿಕ ಚಿತ್ರ
ಮಧುಗಿರಿ: ಬಂಗಾರದ ಒಡವೆ ಆಸೆಗಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹60 ಸಾವಿರ ದಂಡ ವಿಧಿಸಿ ಸೋಮವಾರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಯಾದವ ಕರಕೇರ ತೀರ್ಪು ನೀಡಿದೆ.
2019ರ ಜೂನ್ 6 ರಂದು ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದ ಮೂಡಲಗಿರಿಯಪ್ಪ ಎಂಬವರ ಪತ್ನಿ ಗಿರಿಜಮ್ಮ ಎಂಬವರ ಮೈಮೇಲಿದ್ದ ಒಡವೆ ಆಸೆಗಾಗಿ ಶಿವಕುಮಾರ್ ಮತ್ತು ಮಂಜುನಾಥ್ ಸೇರಿಕೊಂಡು ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ಮಾಯಗೊಂಡನಹಳ್ಳಿ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ಹಗ್ಗದಿಂದ ಮಹಿಳೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ರಂಟವಳಲು ಗ್ರಾಮದ ಪೆಟ್ಟಿಗೆ ಅಂಗಡಿಯಲ್ಲಿ ಡೀಸೆಲ್ ಖರೀದಿಸಿ ಮೃತದೇಹವನ್ನು ಪುಲಮಘಟ್ಟ ಗ್ರಾಮದ ರಸ್ತೆ ಬಳಿ ಬೆಂಕಿ ಹಚ್ಚಿದ್ದಾರೆ. ಬಂಗಾರದ ಒಡವೆ ದೋಚಿದ್ದರು.
ಬಡವನಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪ್ರಭಾಕರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.