ADVERTISEMENT

ನೇಕಾರರಿಗೆ ಧ್ವನಿ ನೀಡಿದ ಮೋದಿ

ರಾಜ್ಯ ನೇಕಾರ ಮಹಾಸಭಾ ಅಧ್ಯಕ್ಷ ಬಿ.ಎಸ್‌.ಸೋಮಶೇಖರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 16:06 IST
Last Updated 14 ಏಪ್ರಿಲ್ 2019, 16:06 IST
ನಗರದಲ್ಲಿ ಬಿಜೆಪಿ ಹಾಗೂ ನೇಕಾರ ಸಮಾಜದ ಮುಖಂಡರು ಅಂಬೇಡ್ಕರ್ ಜಯಂತಿ ಪ್ರಯುಕ್ತ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಿ.ಎಸ್‌.ಸೋಮಶೇಖರ್‌, ಗಂಗಪ್ಪ, ಸಮಾಜದ ಮುಖಂಡರಾದ ಪರಂಧಾಮಯ್ಯ, ಧನಿಯಾಕುಮಾರ್, ರಾಮಕೃಷ್ಣಯ್ಯ, ದೇವರಾಜು, ಎಸ್.ವಿ.ವೆಂಕಟೇಶ್, ಕಮಲಮ್ಮ, ಭಾರತಿ ರಾಜ್ ಇದ್ದಾರೆ.
ನಗರದಲ್ಲಿ ಬಿಜೆಪಿ ಹಾಗೂ ನೇಕಾರ ಸಮಾಜದ ಮುಖಂಡರು ಅಂಬೇಡ್ಕರ್ ಜಯಂತಿ ಪ್ರಯುಕ್ತ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಿ.ಎಸ್‌.ಸೋಮಶೇಖರ್‌, ಗಂಗಪ್ಪ, ಸಮಾಜದ ಮುಖಂಡರಾದ ಪರಂಧಾಮಯ್ಯ, ಧನಿಯಾಕುಮಾರ್, ರಾಮಕೃಷ್ಣಯ್ಯ, ದೇವರಾಜು, ಎಸ್.ವಿ.ವೆಂಕಟೇಶ್, ಕಮಲಮ್ಮ, ಭಾರತಿ ರಾಜ್ ಇದ್ದಾರೆ.   

ತುಮಕೂರು: ಬಿಜೆಪಿಯು ನೇಕಾರರನ್ನು ಗುರುತಿಸಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದೆ. ಹಾಗಾಗಿ ರಾಜ್ಯದ 28 ಕ್ಷೇತ್ರದಲ್ಲೂ ನೇಕಾರ ಸಮುದಾಯದ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ರಾಜ್ಯ ನೇಕಾರ ಮಹಾಸಭಾ ಅಧ್ಯಕ್ಷ ಬಿ.ಎಸ್‌.ಸೋಮಶೇಖರ್‌ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015 ಆಗಸ್ಟ್‌ 7 ರಂದು ರಾಷ್ಟ್ರೀಯ ಕೈ ಮಗ್ಗ ದಿನ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಅವರು ಸಮಾಜಕ್ಕೆ ಧ್ವನಿ ನೀಡಿದ್ದಾರೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ದೇವರ ದಾಸಿಮಯ್ಯ ದಿನಾಚರಣೆಗೆ ಅವಕಾಶ ಮಾಡಿಕೊಟ್ಟರು. ಜೊತೆಗೆ ಸಮಾಜದ ಮುಖಂಡರೊಬ್ಬರು ಶಾಸಕರಾಗಲು ಅವಕಾಶ ಆಯಿತು. ಹಾಗಾಗಿ ನೇಕಾರ ಸಮುದಾಯ ಬಿಜೆಪಿ ಬೆಂಬಲಿಸಬೇಕು ಎಂದು ಹೇಳಿದರು.

ADVERTISEMENT

ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಪ್ಪ ಮಾತನಾಡಿ,‘ನೇಕಾರರ ಸಮಸ್ಯೆಗಳ ಬಗ್ಗೆ ಯಾವ ಸರ್ಕಾರವೂ ಗಮನಹರಿಸದೆ, ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರಯತ್ನ ಸಹ ಮಾಡಲಿಲ್ಲ. ಈ ಸ್ಥಿತಿಯಲ್ಲಿ ಬಿಜೆಪಿಯಿಂದ ನೇಕಾರರಿಗೆ ಹೆಚ್ಚು ನ್ಯಾಯ ಸಿಕ್ಕಿದೆ. ಹೀಗಾಗಿ ಬಿಜೆಪಿಯನ್ನು ಸಮುದಾಯ ಬೆಂಬಲಿಸುತ್ತದೆ’ ಎಂದರು.

ಬಡ ನೇಕಾರರ ನೆರವಿಗೆ ಸರ್ಕಾರಗಳು ಬರಬೇಕು. ತಮಿಳುನಾಡಿನಲ್ಲಿ ಇರುವಂತೆ ಸರ್ಕಾರ ನೇಕಾರರ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಬೇಕು. ಗುರುತಿನ ಚೀಟಿ ಕೊಡಬೇಕು. ನಿವೇಶನ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.