ADVERTISEMENT

ಚಿಕ್ಕನಾಯಕನಹಳ್ಳಿ: ‘ನಾಟಿ ಹುಂಜ’ ಕಥಾ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 6:30 IST
Last Updated 20 ಮೇ 2025, 6:30 IST
<div class="paragraphs"><p>ಕಂಟಲಗೆರೆ ಗುರುಪ್ರಸಾದ್ ರಚಿಸಿದ ನಾಟಿ ಹುಂಜ ಕಥಾ ಸಂಕಲನ ಬಿಡುಗಡೆ ಮಾಡಲಾಯಿತು</p></div>

ಕಂಟಲಗೆರೆ ಗುರುಪ್ರಸಾದ್ ರಚಿಸಿದ ನಾಟಿ ಹುಂಜ ಕಥಾ ಸಂಕಲನ ಬಿಡುಗಡೆ ಮಾಡಲಾಯಿತು

   

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸೋಮವಾರ ಗುರುಪ್ರಸಾದ್ ಕಂಟಲಗೆರೆ ರಚಿಸಿದ ‘ನಾಟಿ ಹುಂಜ’ ಕಥಾ ಸಂಕಲನವನ್ನು ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು.

ಸ್ವಾಮೀಜಿ ಮಾತನಾಡಿ, ಗುರುಪ್ರಸಾದ್ ಪ್ರಾಥಮಿಕ ಶಿಕ್ಷಕರಾಗಿದ್ದು ಸಾಹಿತ್ಯಲೋಕದಲ್ಲಿ ಛಾಪು ಮೂಡಿಸಿ ಅನೇಕ ಪುಸ್ತಕ ರಚಿಸಿದ್ದಾರೆ. ಗೋಡೆಕೆರೆ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ರಾಜ್ಯದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಖಾಸಗಿ ಶಾಲೆಗಳ ವ್ಯಮೋಹದಿಂದ ಸರ್ಕಾರಿ ಶಾಲೆಗಳು ಅವನತಿ ಅಂಚಿನಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ ಹಳ್ಳಿಗಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ವಿಪಲವಾಗಿದೆ. ಈ ಹಿಂದೆ ಶರಣ ಸಾಹಿತ್ಯ, ಶರಣ ಚಳವಳಿ ಎಲ್ಲವು ದಲಿತ ಸಾಹಿತ್ಯಕ್ಕೆ ಒತ್ತು ನೀಡಿ ಎಲ್ಲವನ್ನು ಸಮಾನವಾಗಿ ಕಂಡಿದ್ದಾರೆ ಎಂದರು.

ADVERTISEMENT

ಸಾಹಿತಿ ಕಂಟಲಗೆರೆ ಗುರುಪ್ರಸಾದ್, ನಗರ ಸ್ವಚ್ಛ ಮಾಡುವ ಪೌರಕಾರ್ಮಿಕರು ಹೆಚ್ಚಾಗಿ ನನ್ನ ಕಥಾ ಬಿಡುಗಡೆ ಸಮಾರಂಭ ಎಂದು ಖುಷಿಪಟ್ಟರು. ನಾನು ಅವರ ಜೊತೆ ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತೇನೆ. ಕಥಾ ಸಂಕಲನದಲ್ಲಿ ಪೌರಕಾರ್ಮಿಕರ ಬದುಕಿನ ಅಂಶ ಇರುವ ಕಥೆಯಾಗಿದೆ ಎಂದರು

ಅಗ್ರಹಾರ ಕೃಷ್ಣಮೂರ್ತಿ, ರವಿ ನಿಹಾರ್, ಕುಂದೂರು ತಿಮ್ಮಯ್ಯ, ಸಿ.ಎಸ್ ಕಾಂತರಾಜ್, ಸಿಂಗದಹಳ್ಳಿ ರಾಜಕುಮಾರ್, ಪರಶಿವಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.