ADVERTISEMENT

ಸತ್ತವರ ಹೆಸರಿಗೆ ನರೇಗಾ ಕೂಲಿ ಹಣ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:37 IST
Last Updated 13 ಜೂನ್ 2021, 3:37 IST
ತುರುವೇಕೆರೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಟ್ಟಣದ ಕನ್ನಡ ಭವನದಲ್ಲಿ ಕವಿ ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ತುರುವೇಕೆರೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಟ್ಟಣದ ಕನ್ನಡ ಭವನದಲ್ಲಿ ಕವಿ ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಕೊಡಿಗೇನಹಳ್ಳಿ:ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಾಪುರದಲ್ಲಿ ನರೇಗಾ ಕಾಮಗಾರಿ ನಡಸದೆ ಹಣ ಮಂಜೂರು ಮಾಡಲಾಗಿದೆ. ಅಲ್ಲದೆ, ಸತ್ತವರ ಹೆಸರಿನ ಬ್ಯಾಂಕ್ ಖಾತೆಗೆ ಕೂಲಿ ಹಣ ಹಾಕಿದ್ದಾರೆ ಎಂದು ರೈತ ರಾಮಚಂದ್ರರೆಡ್ಡಿ ದೂರಿದ್ದಾರೆ.

‘ಕೆಂಪಾಪುರದಲ್ಲಿ ಕೃಷಿ ಇಲಾಖೆಯಿಂದ ಕೃಷಿ ಹೊಂಡ ಮಾಡಿಸಲು ಅನುಮೋದನೆ ಪಡೆದ ವೆಂಕಟರೆಡ್ಡಿ ಮತ್ತು ಅವರ ಮಗ 2018ರಲ್ಲೇ ಮೃತಪಟ್ಟಿರುವ ಕೊಂಡರೆಡ್ಡಿಯವರ ಖಾತೆಗೆ ₹3,575 ಎನ್‌ಎಂಆರ್‌ ತೆಗೆಸಿದ್ದಾರೆ. ಚಿಕ್ಕಮಾಲೂರು ನಿವಾಸಿ ರಾಮಚಂದ್ರರೆಡ್ಡಿ ಮತ್ತು ಆತನ ಪತ್ನಿ ರತ್ನಮ್ಮ ಕೂಲಿ ಕೆಲಸಕ್ಕೆ ಹೋಗದಿದ್ದರೂ ಅವರ ಉದ್ಯೋಗ ಕಾರ್ಡ್‌ಗೆ ₹4,400 ಎನ್‌ಎಂ‌ಆರ್‌ ತೆಗೆಸಿದ್ದಾರೆ. ಜೊತೆಗೆ ಸಹಿ ನಕಲು ಮಾಡಿ ಈಗ ಹಣ ಡ್ರಾ ಮಾಡಿಕೊಡುವಂತೆ ಪೀಡಿಸುತ್ತಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೃಷಿ ಇಲಾಖೆ ಮಧುಗಿರಿ ಮತ್ತು ತುಮಕೂರು ಜಿಲ್ಲಾ ಪಂಚಾಯಿತಿ ಒಂಬುಡ್ಸ್‌ಮನ್‌ಗೆ ಪತ್ರ ಬರೆಯಲಾಗಿದೆ’ ಎಂದು ರಾಮಚಂದ್ರರೆಡ್ಡಿ ದೂರಿದ್ದಾರೆ.

‘ನಮ್ಮ ಇಲಾಖೆಗೆ ತಪ್ಪು ಮಾಹಿತಿ ನೀಡಿ ಎನ್‌ಎಂಆರ್‌ ತೆಗೆಸಿರುವ ವಿಚಾರ ಇದೀಗ ಗಮನಕ್ಕೆ ಬಂದಿದೆ. ಸದರಿ ಕಾಮಗಾರಿ ಬಗ್ಗೆ ಪರಿಶೀಲಿಸಿ ಸತ್ತವರ ಖಾತೆಗೆ ಜಮೆಯಾದ ಹಣವನ್ನು ಹಿಂಪಡೆಯಲಾಗುವುದು’ ಎಂದು ಕೊಡಿಗೇನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕ (ಪ್ರಭಾರ) ಮದನ್ ತಿಳಿಸಿದ್ದಾರೆ.

ADVERTISEMENT

‘ಮರಣ ಹೊಂದಿರುವವರ ಹೆಸರನ್ನು ಜಾಬ್‌ಕಾರ್ಡ್‌ನಿಂದ ತೆಗೆಯಲು ನಮಗೆ ಬರುವುದಿಲ್ಲ. ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು’ ಎಂದು ಚಿಕ್ಕಮಾಲೂರು ಪಿಡಿಒ ಧನಂಜಯ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.