ADVERTISEMENT

ಹಾಲು ಉತ್ಪಾದಕರಿಗೆ ಸಹಾಯ ಮಾಡಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:04 IST
Last Updated 5 ಜೂನ್ 2020, 11:04 IST

ಶಿರಾ: ಸರ್ಕಾರ ಹಾಲು ಉತ್ಪಾದಕರನ್ನು ನಿರ್ಲಕ್ಷಿಸುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಸಹಾಯ ಮಾಡಬೇಕು ಎಂದು ಚಿನ್ನೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿ.ಆರ್.ಉಮೇಶ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 119 ಹಾಲು ಉತ್ಪಾದಕ ಸಹಕಾರಿ ಸಂಘಗಳಿದ್ದು, ಹಾಲು ಉತ್ಪಾದಿಸುವ5 ಸಾವಿರ ಕುಟುಂಬಗಳಿವೆ. ಹೈನುಗಾರಿಕೆಯನ್ನು ಜೀವನಾಧಾರ ಮಾಡಿಕೊಂಡಿರುವ ಈ ಕುಟುಂಬಗಳು ಸತತ ಬರಗಾಲ ಮತ್ತು ಕೋವಿಡ್ 19ರ ಹಿನ್ನೆಲೆಯ ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದರು.

ತುಮಕೂರು ಹಾಲು ಉತ್ಪಾದಕ ಒಕ್ಕೂಟದಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಕುಟುಂಬಕ್ಕೆ ಎರಡು ತಿಂಗಳು ಉಚಿತ ಪಡಿತರ, ಆರ್ಥಿಕ ಸಹಾಯ, ಜಾನುವಾರುಗಳಿಗೆ ಉತ್ತಮ ಮೇವು ಮತ್ತು ಸ್ಥಳೀಯ
ಸಹಕಾರ ಸಂಘಗಳ ಮೂಲಕ ಪಶು ಆಹಾರವನ್ನು ಉಚಿತವಾಗಿ ನೀಡಬೇಕು ಎಂದರು. ಮಾರುತಿ, ನಾಗರಾಜು, ಇರ್ಷಾದ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.