ADVERTISEMENT

ತುಮಕೂರು: ಕವಿ ನಾಗಪ್ಪ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 4:55 IST
Last Updated 8 ಜೂನ್ 2025, 4:55 IST
ಎನ್‌.ನಾಗಪ್ಪ
ಎನ್‌.ನಾಗಪ್ಪ   

ತುಮಕೂರು: ಕವಿ, ನಿವೃತ್ತ ಪ್ರಾಂಶುಪಾಲ ಎನ್.ನಾಗಪ್ಪ (71) ನಗರದ ಗೋಕುಲ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಶುಕ್ರವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ, ಇಬ್ಬರು ಪುತ್ರರು ಇದ್ದಾರೆ. ದುಬೈನಲ್ಲಿ ನೆಲೆಸಿರುವ ಮಗನ ಜತೆ ಕೆಲ ದಿನಗಳಿಂದ ವಾಸವಿದ್ದು, ವಾಪಸಾಗಿದ್ದರು. ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಬೆಳಿಗ್ಗೆ ಗೊತ್ತಾಗಿದೆ. ಉಪನ್ಯಾಸಕರಾಗಿದ್ದ ಸಮಯದಲ್ಲಿ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಅಂತರ್ ಜಾತಿ ವಿವಾಹವಾಗಿದ್ದರು. ಆ ಕಾಲಕ್ಕೆ ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು.

‘ಸಾಕವ್ವ’ (ಕವನ ಸಂಕಲನ), ‘ಕುಂಬಾರಗುಂಡಯ್ಯ’ ಕೃತಿ ರಚಿಸಿದ್ದರು. ರೈತ, ದಲಿತ, ಬಂಡಾಯ ಸಾಹಿತ್ಯ, ಪ್ರಗತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದವರು.

ADVERTISEMENT

ಗುಬ್ಬಿ ತಾಲ್ಲೂಕು ಸುರಿಗೇನಹಳ್ಳಿ ಗ್ರಾಮದವರಾಗಿದ್ದು, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಚಿಕ್ಕನಾಯಕನಹಳ್ಳಿ ಕಾಲೇಜಿನಲ್ಲಿ ಸಾಕಷ್ಟು ವರ್ಷ ಕೆಲಸ ನಿರ್ವಹಿಸಿದ್ದರು. ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿ 2015ರಲ್ಲಿ ನಿವೃತ್ತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.