ADVERTISEMENT

ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:51 IST
Last Updated 30 ಮಾರ್ಚ್ 2020, 16:51 IST
ತಿಪಟೂರು ನಗರದಲ್ಲಿ ಲಾಕ್‌ಡೌನ್ ನಡುವೆಯೂ ರಸ್ತೆಗಿಳಿದಿದ್ದ ಜನತೆಗೆ ಪೊಲೀಸರು ಬಿಸಿ ಮುಟ್ಟಿಸಿದರು
ತಿಪಟೂರು ನಗರದಲ್ಲಿ ಲಾಕ್‌ಡೌನ್ ನಡುವೆಯೂ ರಸ್ತೆಗಿಳಿದಿದ್ದ ಜನತೆಗೆ ಪೊಲೀಸರು ಬಿಸಿ ಮುಟ್ಟಿಸಿದರು   

ತಿಪಟೂರು: ಲಾಕ್‌ಡೌನ್ ನಡುವೆಯೂ ರಸ್ತೆಗಿಳಿದಿದ್ದ ಜನತೆಗೆ ಪೊಲೀಸರು ಬಿಸಿ ಮುಟ್ಟಿಸಿ, ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದರು.

ನಗರದ ಎನ್ಎಚ್ 206ರ ಮೋರ್ ಅಂಗಡಿಯ ಮುಂಭಾಗ ಸೋಮವಾರ ಪೊಲೀಸರು ಬೆಳಗಿನಿಂದಲೇ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು ನಿಲ್ಲಿಸಿ ಸಂಪೂರ್ಣ ವಿಚಾರಣೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದು ಸವಾರರನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದರು.

ಇನ್ನೂ ಕೆಲವರು ಮಾಸ್ಕ್ ಧರಿಸದೆ ಬಂದವರಿಗೆ ಟವಲ್ ಅಥವಾ ಕರವಸ್ತ್ರದಿಂದಲೇ ಮಾಸ್ಕ್ ಮಾಡಿಕೊಳ್ಳುವಂತೆ ಮಾಡಿ ಎಚ್ಚರಿಕೆಯನ್ನು ನೀಡಿ ಕಳುಹಿಸಿದರು.

ADVERTISEMENT

ಈ ವಿಷಯ ತಿಳಿದ ಸಾರ್ವಜನಿಕರು ಮಧ್ಯಾಹ್ನದ ವೇಳೆಗೆ ರಸ್ತೆಗೆ ಇಳಿಯುವುದನ್ನೇ ನಿಲ್ಲಿಸಿದರು. ರಸ್ತೆಗಳೆಲ್ಲವೂ ಖಾಲಿ- ಖಾಲಿ
ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.