ಕುಣಿಗಲ್: ಪುರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಮತ್ತು ಸದಸ್ಯೆಯರ ನಡುವೆ ವಾಗ್ವಾದ ನಡೆದು ಸಭೆ ಮುಂದೂಡಲಾಯಿತು.
ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು. ಸದಸ್ಯೆರಾದ ವಿಜಯಲಕ್ಷ್ಮಿ, ಮಂಜುಳಾ, ಪುರಸಭೆ ಅಧ್ಯಕ್ಷೆ ಪತಿ ಆಡಳಿತ ವ್ಯವಸ್ಥೆಯಲ್ಲಿ ಮೂಗು ತೂರಿಸುತ್ತಿದ್ದಾರೆ. ಈಚೆಗೆ ಅಧ್ಯಕ್ಷೆ ಪತಿ ಪುರಸಭೆ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದಾರೆ. ಅಧ್ಯಕ್ಷೆ ಅಧಿಕಾರ ಸ್ವೀಕಾರ ಮಾಡಿ ಎರಡು ತಿಂಗಳಾಗಿದೆ. ಸದಸ್ಯರೊಂದಿಗೆ ವಾರ್ಡ್ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಚರ್ಚೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸದಸ್ಯರು ಮಧ್ಯಪ್ರವೇಶ ಮಾಡಿದರೂ ಪ್ರಯೋಜನವಾಗಲ್ಲಿಲ್ಲ.
ಮುಖ್ಯಾಧಿಕಾರಿ ಮಂಜುಳಾ ಪ್ರತಿಕ್ರಿಯಿಸಿ, ಪತಿ ಔಪಚಾರಿಕವಾಗಿ ಸಿಬ್ಬಂದಿ ಸಭೆ ನಡೆಸಿದ್ದಾರೆ ಎಂದರು. ಆಗ ಸದಸ್ಯೆಯರು ನಿಯಮಾವಳಿ ಪ್ರಕಾರ ಸರಿಯಲ್ಲ ಎಂದು ವಾದಿಸಿದರು.
ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ವಿಷಯ ಚರ್ಚೆಗೆ ಬಂತು. ಸದಸ್ಯರಲ್ಲಿ ಒಮ್ಮತ ಮೂಡದೆ ಗೊಂದಲ ಏರ್ಪಟ್ಟಿತ್ತು. ಸದಸ್ಯೆರಾದ ಮಂಜುಳಾ, ಜಯಲಕ್ಷ್ಮಿ, ಶಬಾನಾ, ಆಸ್ಮಾ, ರೂಪಿಣಿ ಸ್ಥಾಯಿ ಸಮಿತಿ ರಚನೆಗೆ ಪಟ್ಟುಹಿಡಿದು ಸಭಾಧ್ಯಕ್ಷರ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿರೋಧ ತೀವ್ರವಾಗುತ್ತಿದ್ದಂತೆ ಅಧ್ಯಕ್ಷೆ ಮಂಜುಳಾ ಸಭೆಯನ್ನು ಮುಂದೂಡಿದರು.
ಮುಖ್ಯಾಧಿಕಾರಿ ಮಂಜುಳಾ, ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಪರಿಸರ ಎಂಜನಿಯರ್ ಚಂದ್ರಶೇಖರ್, ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.