ADVERTISEMENT

ಉಡುಪಿ ಪರ್ಬಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:52 IST
Last Updated 24 ಡಿಸೆಂಬರ್ 2017, 5:52 IST

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ ಇದೇ 29ರಿಂದ 31ರ ವರೆಗೆ ನಡೆ ಯಲಿರುವ ‘ಉಡುಪಿ ಪರ್ಬ’ ಹಾಗೂ ‘ಉಡುಪಿ ಸಾಹಸ ಉತ್ಸವ’ಕ್ಕೆ ಭರ ದಿಂದ ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 29 ರಂದು ಸಂಜೆ 6 ಗಂಟೆಗೆ ಮಲ್ಪೆಯಲ್ಲಿ ನಡೆಯ ಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಲಿದ್ದಾರೆ.

ಅಂದು ಸಂಜೆ ಮಲ್ಪೆ ಬೀಚ್‌ನಲ್ಲಿ ಶಿವ ಮಣಿ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ.30 ರಂದು ಪ್ರಹ್ಲಾದ್ ಆಚಾರ್ಯ ಅವರಿಂದ ಶಾಡೋ ಪ್ಲೇ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಹಾಗೂ 31 ರಂದು ಸರಿಗಮ ತಂಡದವರಿಂದ ಸಂಗೀತ ಸಂಜೆ ಮೂರು ದಿನಗಳ ಕಾಲ ಸಂಜೆ ನಡೆಯಲಿದೆ ಎಂದು ಹೇಳಿದರು.

ADVERTISEMENT

ಉಡುಪಿ ಪರ್ಬದ ಉತ್ಸವದ ಅಂಗವಾಗಿ 125 ಕಿಮೀ ಸೈಕಲ್ ಸ್ಪರ್ಧೆ, ಈಜು , ಎಕ್ಸ್ಟ್ರೀಮ್ ಸ್ಟೋರ್ಟ್ಸ್‌, ಬಿಎಂಎಕ್ಸ್ ಸ್ಕೇಟ್ ಬೋರ್ಡಿಂಗ್, ಸಾರ್ವಜನಿಕರಿಗಾಗಿ ರಿಯಾಯಿತಿ ದರದಲ್ಲಿ ಜೆಟ್ ಸ್ಕೈ, ವಿಂಡ್ ಸರ್ಫಿಂಗ್, ಬನಾನ ರೈಡ್, ಕಾಯಾಕಿಂಗ್, ಕ್ಯಾನೋಯಿಂಗ್. ಬೀಚ್ ಟಗ್ ಆಫ್ ವಾರ್, ಟೆರಿಸ್ಟ್ರೀಯಾ ಅಡ್ವೆಂಚರ್ ಸ್ಪೋಟ್ಸ್‌ಗಳಾದ ಬೋಲ್ಡಿಂಗ್, ಸ್ಲೇಕ್ ಲೈನ್, ಜುಮ್ಮರಿಂಗ್, ಬರ್ಮಾ ಬ್ರಿಡ್ಜ್, ಕಮಾಂಡೋ ಬ್ರಿಡ್ಜ್, ಸ್ಲೇಕ್ ಲೈನ್, ಸುರಕ್ಷತೆ ಕಾರ್ಯಾಗಾರಗಳು ಈ ಮೂರು ದಿನ ಕಾಲ ನಡೆಯಲಿದೆ.

ರಾಷ್ಟ್ರಮಟ್ಟದ ಜೂನಿಯರ್‌ ಓಪನ್ ಸ್ವಿಮ್ಮಿಂಗ್ ಸ್ಪರ್ಧೆಗಳು ಮಲ್ಪೆಯಲ್ಲಿ 30ರಂದು ನಡೆಯಲಿದೆ. ಇಗಾಗಲೇ 200 ಮಂದಿ 14, 16,18 ವಯೋ ವಿಭಾಗದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ವಿಜೇತರು ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾಗ ವಹಿಸುತ್ತಾರೆ. ಅಗತ್ಯವಿರುವ ಕ್ರೀಡಾ ಸಾಮಗ್ರಿ ತರಿಸಲಾಗಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ತಿಳಿಸಿದರು.

ಶ್ವಾನ ಪ್ರದರ್ಶನ

ಡಿ.29 ರಂದು ಗೂಡುದೀಪ ಸ್ಪರ್ಧೆ ನಡೆಯಲಿದೆ. ಆಧುನಿಕ, ಸಾಂಪ್ರಾದಾಯಿಕ, ಹಾಗೂ ಪರಿಸರ ಸ್ನೇಹಿ ವಿಭಾಗ ಎಂದು ಅದನ್ನು ವಿಂಗಡಿಸಲಾಗಿದೆ. 29–31 ಆಹಾರ ಮೇಳವನ್ನು ಆಯೋಜಿಸಲಾಗಿದೆ. ಿ ಅಜ್ಜರಕಾಡು ಬಯಲು ರಂಗ ಮಂದಿರದಲ್ಲಿ ಡಿ.31 ರಂದು ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ತಳಿ ಹಾಗೂ ವಯೋಮತಿ ಅನ್ವಯ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.