ADVERTISEMENT

ಕುರಿಯ: ಯಕ್ಷರಂಗದ ಧ್ರುವತಾರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:50 IST
Last Updated 8 ಅಕ್ಟೋಬರ್ 2012, 8:50 IST

ಬೆಳ್ತಂಗಡಿ: ಮೇರು ಕಲಾವಿದರಾಗಿ ಮೆರೆದ ಕುರಿಯ ವಿಠಲ ಶಾಸ್ತ್ರಿಯಕ್ಷಗಾನ ರಂಗದ ಧ್ರುವತಾರೆ ಯಾಗಿ ಮಿಂಚಿದ್ದಾರೆ ಎಂದು ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಹೇಳಿದರು.

ಉಜಿರೆಯಲ್ಲಿ ಭಾನುವಾರ ಕುರಿಯ ವಿಠಲ ಶಾಸ್ತ್ರಿ ಜನ್ಮ ಶತಾಬ್ದಿ ಸ್ಮರಣಾರ್ಥ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳ ಮೇಳದ ಸಂಘಟಕರಾಗಿ, ಕಲಾವಿದರಾಗಿ, ಯಕ್ಷಗಾನ ತರಬೇತಿ ಕೇಂದ್ರದ ಶಿಕ್ಷಕರಾಗಿ ಆವರು ಆನುಪಮ ಸೇವೆಯನ್ನು ಸಲ್ಲಿಸಿದ್ದಾರೆ.

ಉಜಿರೆಯ ಕಲಾಪೋಷಕರಾಗಿದ್ದ ಹರಿದಾಸ್ ಭಟ್ ಆವರು ಧರ್ಮಸ್ಥಳಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಮಾತನಾಡಿ ಕಲಾವಿದರಿಗೆ ಅಹಂಕಾರ ಇರಬಾರದು. ಸರಳ ಜೀವನ, ಉನ್ನತ ಚಿಂತನೆ ಹಾಗೂ ನಿರಂತರ ಅಧ್ಯಯನದೊಂದಿಗೆ ಕಲಾವಿದರು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಡಾ.ಎಂ.ಎಂ.ದಯಾಕರ್, ವಿಜಯ ರಾಘವ ಪಡ್ವೆಟ್ನಾಯ, ಕಟೀಲಿನ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ, ಡಾ. ಎಂ.ಪ್ರಭಾಕರ ಜೋಶಿ ಮತ್ತು ಉಜಿರೆ ಅಶೋಕ ಭಟ್ ಶುಭಾಶಂಸನೆ ಮಾಡಿದರು.

ಸುಬ್ರಾಯ ಪೆಜತ್ತಾಯ, ನಾರಾಯಣ ಕೆದಿಲಾಯ, ಗುಣಪಾಲ ಕಡಂಬ, ಕಾಶ್ಮೀರ್ ಮಿನೇಜಸ್, ವೆಂಕಟ್ರಾಯ ಆಡೂರ್ ಮತ್ತು ಕೆ.ಶ್ರೀಕರ ರಾವ್ ಆವರನ್ನು ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.