ADVERTISEMENT

ಕ್ಷಯ ರೋಗ ತಡೆ-ಸಮುದಾಯಕ್ಕೆ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2012, 7:55 IST
Last Updated 27 ಮಾರ್ಚ್ 2012, 7:55 IST

ಉಡುಪಿ: ಕ್ಷಯರೋಗ ಮಾರಕ ಕಾಯಿಲೆಯಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ. ಆದ್ದರಿಂದ ಈ ರೋಗ ತಡೆಗಟ್ಟುವ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ಸೀತಾರಾಮ ಶೆಟ್ಟಿ ತಿಳಿಸಿದರು.

ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದುರ್ಗಾಪರಮೇಶ್ವರಿ ದೇವಸ್ಥಾನ ಮಂದಾರ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂದಾರ್ತಿ, ಉಡುಪಿ ತಾಲ್ಲೂಕು ಕ್ಷಯ ನಿಯಂತ್ರಣ ಘಟಕ ಆಶ್ರಯದಲ್ಲಿ ನಡೆದ  ಜಿಲ್ಲಾ ಮಟ್ಟದ `ವಿಶ್ವ ಕ್ಷಯರೋಗ ದಿನಾಚರಣೆ~ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿನ ಜನರಿಗೆ ಕ್ಷಯರೋಗ ಹರಡುವ ಬಗ್ಗೆ ಮತ್ತು  ನಿಯಂತ್ರಿಸುವ ಕುರಿತು ಅರಿವು ಇಲ್ಲದ ಕಾರಣ ಈ ರೋಗದ ಬಗ್ಗೆ ಅರಿತುಕೊಂಡು ನಿಯಂತ್ರಿಸಲು ಸಂಘಟಿತರಾಗಿ ಪ್ರಯತ್ನಿಸಬೇಕು. ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದರು. 

ಪ್ರಭಾರ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬಿ.ವಿಶ್ವನಾಥ್ ಮಾತನಾಡಿ ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 1,100 ರಿಂದ 1,200 ಮಂದಿ ಕ್ಷಯರೋಗಿಗಳು ಪತ್ತೆಯಾಗುತ್ತಿದ್ದು, ಶೆ.98 ಮಂದಿ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು. 

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಉಪನ್ಯಾಸ ನೀಡಿದರು. ಹೆಗ್ಗುಂಜೆ ಗ್ರಾ.ಪಂ.ಅಧ್ಯಕ್ಷೆ ಆಶಾ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾ.ಪಂ.ಸದಸ್ಯೆ ರಮಣಿ ಎಸ್.ಶೆಟ್ಟಿ ಮಂದಾರ್ತಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ವಿ.ಜಿ. ನಾಯಕ್, ಕೇಶವ ಗೌಡ, ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಬ್ರಹ್ಮಣ್ಯ ಪ್ರಭು, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.