ಕಿರಿಮಂಜೇಶ್ವರ (ಬೈಂದೂರು): ಇಲ್ಲಿನ ಸಮುದ್ರ ತೀರದ ಕೊಡೇರಿಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಉದ್ದೇಶಿಸಿರುವ ಹಕ್ರೆಮಠ ದೇವಸ್ಥಾನದ ವೆಂಕಟರಮಣ ದೇವರ ಗರ್ಭಗುಡಿಯ ಷಢಾಧಾರ ಪ್ರತಿಷ್ಠೆ ಮತ್ತು ನಿಧಿಕುಂಭ ಸ್ಥಾಪನಾ ಸಮಾರಂಭ ಶುಕ್ರವಾರ ನೆರವೇರಿತು.
ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಸಾಯ್ಬರಕಟ್ಟೆ ಸುಧೀರ ಅಡಿಗ ದೇಗುಲ ನಿರ್ಮಾಣ ಒಂದು ಪವಿತ್ರ ಕಾರ್ಯ ವಾಗಿದ್ದು, ಅದು ಯಶಸ್ವಿಯಾಗಿ ನೆರವೇರಲು ಎಲ್ಲ ಆಸ್ತಿಕರೂ ಸಹಕಾರ ನೀಡಬೇಕು ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮಹಾ ಪ್ರಬಂಧಕ ಕೆ.ಎಸ್.ಪ್ರಕಾಶ ರಾವ್, ಮುಂಬೈ ಉದ್ಯಮಿ ಮಹಾದೇವ ಪೂಜಾರಿ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಎಂ.ಖಾರ್ವಿ, ಲೋಕೋಪಯೋಗಿ ಇಲಾಖೆಯ ಹನುಮಂತ ರಾವ್, ಉಪ್ಪುಂದ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಖಾರ್ವಿ, ನಿವೃತ್ತ ಪ್ರಾಧ್ಯಾಪಕ ಕೆ.ವಾಸುದೇವ ಕಾರಂತ, ನಿವೃತ್ತ ಪ್ರಾಂಶುಪಾಲ ಎಂ.ಶಂಕರ ಖಾರ್ವಿ, ನಿವೃತ್ತ ಶಿಕ್ಷಕ ಯು. ಶ್ರೀನಿವಾಸ, ಕೆ.ಸದಾಶಿವ ಶ್ಯಾನುಭಾಗ್, ಇತರರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.