ADVERTISEMENT

ಹೆಬ್ರಿ: ಸಹಾಯಧನ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 7:07 IST
Last Updated 3 ಜನವರಿ 2014, 7:07 IST

ಹೆಬ್ರಿ:ಇಲ್ಲಿನ ಜೇಸಿಐ ಚಾರಿಟಬಲ್‌ ಟ್ರಸ್ಟ್ ವತಿಯಿಂದ 10ನೇ ವರ್ಷದ ವಿದ್ಯಾರ್ಥಿ ವೇತನ, ವೈದ್ಯಕೀಯ ಸಹಾಯಧನ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಮಂಗಳವಾರ ನಡೆಯಿತು. ಹೆಬ್ರಿ ಪರಿಸರದ 29 ಶಾಲೆಗಳ 150 ವಿದ್ಯಾರ್ಥಿಗಳಿಗೆ ಸುಮಾರು ₨65 ಸಾವಿರ ಆರ್ಥಿಕ ಸಹಾಯಧನ ವಿತರಿಸಲಾಯಿತು.

ಸತತ ಶೇ 100 ಫಲಿತಾಂಶ ಪಡೆಯುತ್ತಿರುವ ಹೆಬ್ರಿಯ ಎಸ್ ಆರ್ ಆಂಗ್ಲಮಾ­ಧ್ಯಮ ಶಾಲೆಗೆ ವಿಶೇಷ ಪುರಸ್ಕಾರ ನೀಡಲಾಯಿತು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಠ್ಠಲ ಶೆಟ್ಟಿ ಟ್ರಸ್ಟ್ ಸಮಗ್ರ ಮಾಹಿತಿ ನೀಡಿದರು. ಹೆಬ್ರಿ ಜೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಯೋಗೀಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಜೇಸಿ ಸೆನೆಟರ್ ಹರಿಶ್ಚಂದ್ರ ಅಮೀನ್ ಭಾಗವಹಿಸಿ ಶುಭಹಾರೈಸಿದರು.

ಸಮಾರಂಭದಲ್ಲಿ ಹೆಬ್ರಿಯ ಜೇಸಿಐ ಚಾರಿಟಬಲ್‌ ಟ್ರಸ್ಟ್ ದಾನಿಗಳಾದ ಡಾ.ಭಾರ್ಗವಿ ರಾಮಚಂದ್ರ ಐತಾಳ್, ಬಿ.ಸಿ.ರಾವ್ ಶಿವಪುರ, ಹೆಬ್ರಿ ಜೇಸಿಐ ಅಧ್ಯಕ್ಷ ರಾಧಾಕೃಷ್ಣ ಕೃಮದಾರಿ, ಜೇಸಿರೆಟ್ ವೀಣಾ ಆರ್. ಭಟ್, ಶಕುಂತಳಾ ಬಲ್ಲಾಳ್, ಸುಜಾತ ಹರೀಶ್ ಪೂಜಾರಿ, ಬಾಲಕೃಷ್ಣ ಶೆಣೈ, ಮಹಾಬಲೇ­ಶ್ವರ ಅಡಿಗ, ಶ್ರೀಧರ ಜೋಯಿಸ್, ಗುರುಮೂರ್ತಿ ಜೋಯಿಸ್, ಡಾ.ರವಿಪ್ರಸಾದ ಹೆಗ್ಡೆ, ಲಕ್ಷ್ಮೀನಾರಾ­ಯಣ ಜೋಯಿಸ್, ಪ್ರಕಾಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಶೆಣೈ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT