ADVERTISEMENT

‘ಒತ್ತಡದಲ್ಲಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದಿರಿ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 8:56 IST
Last Updated 12 ಸೆಪ್ಟೆಂಬರ್ 2013, 8:56 IST

ಕುಂದಾಪುರ: ಕ್ಷಣ ಕ್ಷಣವೂ ಒತ್ತಡದ ಸಂದರ್ಭಗಳನ್ನು ಕಾಣಬೇಕಾದ ಈ ದಿನಗಳಲ್ಲಿ ಮಾನಸಿಕ ಸ್ಥೈರ್ಯ ಕಾಪಾಡಿ ಕೊಂಡು ಜೀವನವನ್ನು ಎದುರಿಸ ಬೇಕಾದ ಅನಿವಾರ್ಯತೆ ಇದ್ದು, ಮಾನಸಿಕವಾಗಿ ಕುಸಿಯುವ ವ್ಯಕ್ತಿಗಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡು ವುದರಿಂದ ಸಾಮಾಜಿಕ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ಕುಂದಾಪುರದ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಯಶೋಧಾ ಎಸ್ ಒಂಟಗೋಡಿ ಹೇಳಿದರು.

ಕುಂದಾಪುರದ ಶ್ರೀ ಮಾತಾ ಆಸ್ಪತ್ರೆ ಯಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಾವರ- ಬಾರಕೂರು ಇವರ ಸಹಕಾರದೊಂದಿಗೆ ರಾಷ್ಟ್ರೀಯ ಆತ್ಮಹತ್ಯೆ ನಿವಾರಣಾ ದಿನಾಚರಣೆಯ ಅಂಗವಾಗಿ ಮಂಗಳ ವಾರ ನಡೆದ ಆತ್ಮಹತ್ಯೆ ತಡೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಾನಸಿಕ ತಜ್ಞೆ ಡಾ.ಕೆ.ಎಸ್ ಲತಾ ಅವರು ಇತ್ತೀಚಿನ ದಿನಗಳಲ್ಲಿ ಹದಿಹರೆಯದ ವಯಸ್ಕರಲ್ಲಿ ಸಣ್ಣ ಸಣ್ಣ ಕಾರಣಗಳಿಗೆ  ಆತ್ಮಹತ್ಯೆಯ ನಿರ್ಧಾರಗಳು ಹೆಚ್ಚುತ್ತಿದ್ದು, ಆತ್ಮಹತ್ಯೆಗೆ ಮುಖ್ಯ ಕಾರಣ ಕಳಂಕ ಎನ್ನುವುದು ಹಲವು ಅಂಕಿ-ಅಂಶಗಳ ಮೂಲಕ ಸಾಬೀತಾಗಿದೆ. ಮಾನಸಿಕ ತೊಂದರೆ, ದೀರ್ಘಾವಧಿ ಕಾಯಿಲೆ, ಹಣಕಾಸು ಮುಗ್ಗಟ್ಟು, ವೈವಾಹಿಕ ತೊಂದರೆ, ಕಿರುಕುಳ ಸೇರಿದಂತೆ ಆತ್ಮಹತ್ಯೆಯ ಹಿಂದೆ ಹಲವಾರು ಕಾರಣಗಳು ಕಾಣಸಿಗುತ್ತದೆ ಎಂದು ವಿವರಿಸಿದ ಅವರು ಪ್ರತಿಯೊಂದು ಸಮಸ್ಯೆಗೂ ಪರಿಹಾರೋಪಾಯಗಳಿವೆ, ಸಾವೇ ಎಲ್ಲದಕ್ಕೂ ಪರುಹಾರವಲ್ಲ ಎನ್ನುವ ಮಾನಸಿಕ ದೃಢತೆ  ಬೆಳೆಸಿಕೊ ಳ್ಳುವುದರಿಂದ ಈ ಪ್ರವೃತ್ತಿ ಕಡಿಮೆ ಮಾಡಲು ಸಾಧ್ಯ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ಶೆಟ್ಟಿ ಪ್ರೇಮಾ ಶೆಟ್ಟಿ ಅತಿಥಿಗಳಾಗಿದ್ದರು.
ಮಾನಸಿಕ ರೋಗ ತಜ್ಞ ಡಾ.ಪ್ರಕಾಶ ತೋಳಾರ್ ಸ್ವಾಗತಿಸಿದರು, ಲಕ್ಷ್ಮೀ ನಿರೂಪಿಸಿದರು, ದಯಾನಂದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.