ADVERTISEMENT

‘ಕಂಬಳಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 11:53 IST
Last Updated 6 ಡಿಸೆಂಬರ್ 2013, 11:53 IST
ಕುಂದಾಪುರ ತಾಲ್ಲೂಕಿನ ಮೊಳಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೊಳಹಳ್ಳಿ ಪಟೇಲರ ಮನೆಯವರ ‘ಕಂಬಳೋತ್ಸವಕ್ಕೆ’ ಚಾಲನೆ ನೀಡಲಾಯಿತು.
ಕುಂದಾಪುರ ತಾಲ್ಲೂಕಿನ ಮೊಳಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೊಳಹಳ್ಳಿ ಪಟೇಲರ ಮನೆಯವರ ‘ಕಂಬಳೋತ್ಸವಕ್ಕೆ’ ಚಾಲನೆ ನೀಡಲಾಯಿತು.   

ಕುಂದಾಪುರ: ಕರಾವಳಿ ಜಿಲ್ಲೆಗಳಲ್ಲಿ ತನ್ನದೇ ಇತಿಹಾಸ ಹೊಂದಿರುವ, ಹಾಗೂ ಮನೋರಂಜನೆಗಾಗಿ ಹಿರಿ ಯರು ರೂಪಿಸಿರುವ ಕಂಬಳ ಇಂದು ಕರಾವಳಿಯ ಅಭಿಮಾನದ ದ್ಯೋತ ಕವಾಗಿ ಮೂಡಿಬಂದಿದೆ. ಕಂಬಳ ಉತ್ಸವಗಳಿಗೆ ಸರ್ಕಾರದಿಂದ ಪ್ರೋ ತ್ಸಾಹ ಹಾಗೂ ಸಹಕಾರ ಅಗತ್ಯ ಎಂದು ರಾಜ್ಯೋತ್ಸವ ಪುರಸ್ಕೃತ  ಬಾರಕೂರು ಶಾಂತರಾಮ ಶೆಟ್ಟಿ ಹೇಳಿದರು.

ತಾಲ್ಲೂಕಿನ ಮೊಳಹಳ್ಳಿ ಕಂಬಳಗದ್ದೆಯಲ್ಲಿ ಮೊಳಹಳ್ಳಿ ಒಂಭತ್ತು ಮನೆಯವರು, ಮೊಳಹಳ್ಳಿ ಪಟೇಲರ ಮನೆಯವರು ಮತ್ತು ಕಂಬಳ ಮಹೋ ತ್ಸವ ಸಮಿತಿಯ ಸಂಯುಕ್ತ ಆಶ್ರಯ ದಲ್ಲಿ ಇತ್ತೀಚೆಗೆ ನಡೆದ ಮೊಳಹಳ್ಳಿ ಕಂಬಳ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಟೀಲು ದುರ್ಗಾಪರಮೇಶ್ವರಿ ಪದವಿ ಕಾಲೇಜಿನ  ಪ್ರಾಂಶುಪಾಲ ಎಂ. ಬಾಲ ಕೃಷ್ಣ ಶೆಟ್ಟಿ  ಮುಖ್ಯ ಅತಿಥಿಗಳಾಗಿದ್ದರು.

ಕಂಬಳ ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ.ದಿನೇಶ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯ ರಶ್ವಥ್ ಕುಮಾರ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರದೀಪ್‌ಚಂದ್ರ ಶೆಟ್ಟಿ, ಹೃದಯ ಕುಮಾರ್ ಶೆಟ್ಟಿ, ಮೊಳಹಳ್ಳಿ ಪಟೇಲರ ಮನೆಯ ಕರುಣಾಕರ ಸೇರ್ವೆಗಾರ್, ಶರತ್ ಶೆಟ್ಟಿ, ನಾರಾಯಣ ಶೆಟ್ಟಿ , ವಿಜಯಾನಂದ ಶೆಟ್ಟಿ, ಮೊಳಹಳ್ಳಿ ಮಹೇಶ್ ಹೆಗ್ಡೆ ಹಾಗೂ ನಿವೃತ್ತ ಶಿಕ್ಷಕ ರತ್ನಾಕರ ಶೆಟ್ಟಿ ಸೇರಿದಂತೆ ಇತರರು ಕಂಬಳ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಶೆಟ್ಟಿ ಬೆಳಗೋಡು ಸ್ವಾಗತಿಸಿದರು, ಅಕ್ಷಯ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.