ADVERTISEMENT

‘ಮರಣ ಮೃದಂಗ’ಕ್ಕೆ ಪ್ರಥಮ ಸ್ಥಾನ

ರಾಜ್ಯ ಮಟ್ಟದ ನಾಟಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:27 IST
Last Updated 7 ಡಿಸೆಂಬರ್ 2013, 8:27 IST

ಉಡುಪಿ: ಉಡುಪಿಯ ರಂಗಭೂಮಿ ಸಂಸ್ಥೆ ಡಾ.ಟಿ.ಎಂ.ಎ. ಪೈ, ಎಸ್‌.ಎಲ್‌. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ್‌ ಸ್ಮರಣಾರ್ಥ ಏರ್ಪ­ಡಿಸಿದ್ದ 34ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬೈಂದೂರಿನ ಲಾವಣ್ಯತಂಡದ ‘ಮರಣ ಮೃದಂಗ’ ನಾಟಕ ಪ್ರಥಮ ಸ್ಥಾನ ಪಡೆದಿದೆ.

ಶಿವಮೊಗ್ಗ ಕಲಾಜ್ಯೋತಿ ತಂಡದ ಬಿಂಬ ನಾಟಕ ದ್ವಿತೀಯ ಹಾಗೂ ಹಾರಾಡಿ ಭೂಮಿಕಾ ತಂಡದ ಅಗ್ನಿಲೋಕ ನಾಟಕ ತೃತೀಯ ಸ್ಥಾನ ಗಳಿಸಿದೆ.

ಶ್ರೇಷ್ಠ ನಿರ್ದೇಶಕರಾಗಿ ಬೈಂದೂರು ಲಾವಣ್ಯ ತಂಡದ  ರಾಜೇಂದ್ರ ಕಾರಂತ್‌ ಪ್ರಥಮ, ಶಿವಮೊಗ್ಗ ಕಲಾಜ್ಯೋತಿ ತಂಡದ ಜೆ. ಮಧುಸೂದನ ಘಾಟೆ ದ್ವಿತೀಯ, ಹಾರಾಡಿಯ ಭೂಮಿಕಾ ತಂಡದ ಬಿ.ಎಸ್‌.ರಾಮ್‌ ಶೆಟ್ಟಿ ತೃತೀಯ ಪ್ರಶಸ್ತಿ ಗಳಿಸಿದ್ದಾರೆ.

ಶ್ರೇಷ್ಠ ನಟ ಪ್ರಥಮ ಪ್ರಶಸ್ತಿ ಮರಣ ಮೃದಂಗ ನಾಟಕದ ನರಸಿಂಹ ಪಾತ್ರಧಾರಿ ಯೋಗೇಶ್ ಬಂಕೇಶ್ವರ್ ಅವರಿಗೆ ಲಭಿಸಿದೆ. ಅದೇ ನಾಟಕದ ಭರಮ್ಯ ಪಾತ್ರಧಾರಿ ಬಿ. ಗಣೇಶ್‌ ಕಾರಂತ್ ದ್ವಿತೀಯ ಮತ್ತು ಅಗ್ನಿಲೋಕ ನಾಟಕದ ಅಗ್ನಿ ಪಾತ್ರಧಾರಿ ಬಿ.ಎಸ್‌. ರಾಮ್‌ ಶೆಟ್ಟಿ ತೃತೀಯ ಬಹುಮಾನ ಪಡೆದಿದ್ದಾರೆ.

ಶ್ರೇಷ್ಠ ನಟಿ ವಿಭಾಗದಲ್ಲಿ ಬಿಂಬ ನಾಟಕದ ಸೀತೆ ಪಾತ್ರಧಾರಿ ಮಧುರಾ ಪ್ರಥಮ , ಶಿವಮೊಗ್ಗ ಅಂಚೆ ಸಾಂಸ್ಕೃತಿಕ ಬಳಗದ ಕಿತ್ತೂರ ನಿರಂಜನಿ ನಾಟಕದ ನಿರಂಜನಿ ಪಾತ್ರಧಾರಿ ಸುಪ್ರಿಯಾ ಎಸ್.ರಾವ್‌ ದ್ವಿತೀಯ, ಅಂಧಗಾಂಧಾರ ನಾಟಕದ ಕೋಮಲ ಗಾಂಧಾರಿ ಪಾತ್ರಧಾರಿ ಎಚ್‌.ಎಸ್‌. ಕವಿತ ತೃತೀಯ ಸ್ಥಾನ ಪಡೆದಿದ್ದಾರೆ.

ಸಂಗೀತ ವಿಭಾಗದಲ್ಲಿ ಶಿವಮೊಗ್ಗ ತಂಡದ ಕಿತ್ತೂರ ನಿರಂಜನಿ ನಾಟಕ ಪ್ರಥಮ, ಲಾವಣ್ಯ ತಂಡದ ಮರಣ ಮೃದಂಗ ದ್ವಿತೀಯ, ಶಿವಮೊಗ್ಗ ಬಿಂಬ ನಾಟಕ ತೃತೀಯ ಸ್ಥಾನ ಗಳಿಸಿದೆ.

ಭೂಮಿಕಾ ಹಾರಾಡಿ ತಂಡದ ಅಗ್ನಿಲೋಕ ಪ್ರಥಮ, ಶಿವಮೊಗ್ಗ ಬಿಂಬ ನಾಟಕ ದ್ವಿತೀಯ, ಉಡುಪಿಯ ಸುಮನಸಾ ಕೊಡವೂರು ತಂಡದ ಎಲ್ಲರೂ ನನ್ನ ಮಕ್ಕಳೇ ಶ್ರೇಷ್ಠ ರಂಗಪರಿಕರ ವಿಭಾಗ­ದಲ್ಲಿ ತೃತೀಯ ಸ್ಥಾನ ಪಡೆದಿದೆ.
ಪ್ರಸಾದನ ವಿಭಾಗದಲ್ಲಿ ಅಗ್ನಿಲೋಕ ನಾಟಕ ಪ್ರಥಮ, ಕಿತ್ತೂರ ನಿರಂಜನಿ ದ್ವಿತೀಯ, ಬಿಂಬ ನಾಟಕ ತೃತೀಯ ಸ್ಥಾನ ಪಡೆದುಕೊಂಡಿದೆ.

ಮರಣ ಮೃದಂಗ ನಾಟಕ, ಕಿತ್ತೂರ ನಿರಂಜನಿ ನಾಟಕ, ಎಲ್ಲರೂ ನನ್ನ ಮಕ್ಕಳೇ ನಾಟಕ ಶ್ರೇಷ್ಠ ಬೆಳಕು ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ.

ಬೆಂಗಳೂರು ಶ್ರೀ ಕೃಷ್ಣ ಕಲಾಕೇಂದ್ರ ತಂಡದ ರಕ್ತಾಂಜಲಿ ನಾಟಕದ ನಟ್ಟು ಶಾಸ್ತ್ರಿ ಪಾತ್ರಧಾರಿ ಶಿವ­ರಾಮ ಹೆಗಡೆ ಉತ್ತಮ ಹಾಸ್ಯ ಪಾತ್ರಧಾರಿ­ಯಾಗಿ ಎಂದು ಗುರುತಿಸಲಾಗಿದೆ. ಕೊಡವೂರು ಸುಮನಸಾ ತಂಡ ಕೆ. ರಾಜಗೋಪಾಲ ಶೇಟ್‌, ಬೆಂಗಳೂರು ಶ್ರೀಕೃಷ್ಣ ಕಲಾಕೇಂದ್ರದ ಶ್ರೀದರ್ಶನ್‌, ಕೊಡವೂರು ತಂಡದ ಬಾಲಕೃಷ್ಣ ಕೊಡವೂರು, ಕುಡ್ಲ ರಂಗಮಿತ್ರ ತಂಡದ ಎಂ. ರಂಗನಾಥ, ಲಾವಣ್ಯ ತಂಡದ ಗಿರೀಶ್‌ ಬೈಂದೂರು ಮಚ್ಚುಗೆ ಬಹುಮಾನ ಪಡೆದಿದ್ದಾರೆ.

ಜಿ.ಕೆ. ಐತಾಳ್‌, ಕೆ.ಎಂ. ರಾಘವ ನಂಬಿಯಾರ್, ಆರ್.ಎಲ್. ಭಟ್‌, ಎಸ್‌.ಎ. ಕೃಷ್ಣಯ್ಯ, ಜಾನಕಿ ಬ್ರಹ್ಮಾವರ ತೀರ್ಪುಗಾರರ ತಂಡದಲ್ಲಿದ್ದರು.

2014 ಜನವರಿ 5ರಂದು ಬಹುಮಾನ ವಿತರಣೆ ನಡೆಯಲಿದೆ ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ವಾಸುದೇವ ರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.