ADVERTISEMENT

ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಪ್ರಮೋದ್ ಮಧ್ವರಾಜ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 7:14 IST
Last Updated 9 ಫೆಬ್ರುವರಿ 2018, 7:14 IST

ಉಡುಪಿ: ವಾರ್ಡ್‌ ಸಭೆಗಳಲ್ಲಿ ಅಹವಾಲು ಆಲಿಸಿ ನೀಡಿದ ಭರವಸೆಗಳನ್ನು ಈಡೇರಿಸಲಾಗುತ್ತಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಬುಧವಾರ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಜನರ ಸಮಸ್ಯೆಗಳನ್ನು ಅರಿಯುವ ಉದ್ದೇಶದಿಂದಲೇ ಎಲ್ಲ ವಾರ್ಡ್‌ ಹಾಗೂ ಗ್ರಾಮಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಜನರ ಬೇಡಿಕೆಗಳನ್ನು ಪರಿಗಣಿಸಿಯೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ₹10 ಕೋಟಿ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಹಣ ಬಂದಿರುವ ಕಾರಣ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಚಿಟ್ಪಾಡಿಯಲ್ಲಿ ₹5 ಲಕ್ಷ ವೆಚ್ಚದ ಮಳೆ ನೀರು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿದ ಅವರು ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ಅಂಗವಿಕಲತೆಯಿಂದ ಮಕ್ಕಳಿಬ್ಬರು ಹಾಸಿಗೆ ಹಿಡಿದಿರುವ ಕುಟುಂಬದ ಸಮಸ್ಯೆ ಆಲಿಸಿದ ಅವರು, ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ನಿವೇಶನಗಳಲ್ಲಿ ಒಂದನ್ನು ನೀಡುವಂತೆ ಸೂಚನೆ ನೀಡಿದರು. ಮನೆ ನಿರ್ಮಾಣಕ್ಕೆ ₹2.70 ಲಕ್ಷ ಅನುದಾನವನ್ನು ಸಹ ಮಂಜೂರು ಮಾಡಿ ವರದಿ ನೀಡಿ ಎಂದು ಪೌರಾಯುಕ್ತ ಡಿ. ಮಂಜುನಾಥಯ್ಯ ಅವರಿಗೆ ತಾಕೀತು ಮಾಡಿದರು.

ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನರೋನ್ಹಾ , ಚಿಟ್ಪಾಡಿ ವಾರ್ಡ್‌ ಸದಸ್ಯ ನವೀನ್ ಭಂಡಾರಿ, ಬಡಗಬೆಟ್ಟು ವಾರ್ಡ್ ಸದಸ್ಯ ವಿಜಯ ಪೂಜಾರಿ, ಬೈಲೂರು ವಾರ್ಡ್ ಸದಸ್ಯ ರಮೇಶ್ ಕಾಂಚನ್, ಒಳಕಾಡು ವಾರ್ಡ್‌ ಸದಸ್ಯೆ ಗೀತಾ ರವಿ ಶೇಟ್ , ಕುಂಜಿಬೆಟ್ಟು ವಾರ್ಡ್ ಸದಸ್ಯ ಶಶಿಕಾಂತ್ ಕುಂದರ್, ಇಂದಿರಾ ನಗರ ವಾರ್ಡ್‌ ಸದಸ್ಯೆ ಹೇಮಲತಾ ಹಿಲರಿ, ಸಹಾಯಕ ಇಂಜಿನಿಯರ್ ಗಣೇಶ್ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.