ADVERTISEMENT

‘ದೀಪಾವಳಿ ಎಲ್ಲರ ಮನೆ, ಮನ ಬೆಳಗಲಿ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 15:38 IST
Last Updated 3 ನವೆಂಬರ್ 2021, 15:38 IST
–ಜೆರಾಲ್ಡ್ ಲೋಬೊ, ಉಡುಪಿ ಧರ್ಮಾಧ್ಯಕ್ಷರು
–ಜೆರಾಲ್ಡ್ ಲೋಬೊ, ಉಡುಪಿ ಧರ್ಮಾಧ್ಯಕ್ಷರು   

ಮಾನವ ಸಂಬಂಧಗಳನ್ನು ಬೆಳಗಿಸುವ, ಗಾಢಗೊಳಿಸುವ ದೀಪಾವಳಿ ಮತ್ತೊಮ್ಮೆ ಬಂದಿದೆ. ಕೋವಿಡ್ ಭೀತಿಯಿಂದ ಮುಕ್ತಗೊಳ್ಳುವ ಶುಭ ಸಮಯದಲ್ಲಿ ಭರವಸೆಯ ದೀಪವನ್ನು ಬೆಳಗಿಸುವ ಹಬ್ಬ ದೀಪಾವಳಿಯಾಗಿದೆ. ಪ್ರತಿಯೊಬ್ಬರೂ ಒಂದು ದೀಪವಿದ್ದಂತೆ, ಪರರ ಬಾಳನ್ನು ಅರಳಿಸುವುದೇ ಜೀವನದ ಉದ್ದೇಶವಾಗಬೇಕು. ದುಷ್ಟಶಕ್ತಿಯನ್ನು ನಾಶಪಡಿಸಿ ಒಳ್ಳೆಯತನ ವಿಜಯ ಸಾಧಿಸಿದ ಘಟನೆಗಳನ್ನು ಧ್ಯಾನಿಸುವುದರ ಜತೆಗೆ ಎಲ್ಲರೂ ಸಂತೋಷದಿಂದ ಸಿಹಿ ಹಂಚಿ ಸಂಭ್ರಮಿಸಿ. ಎಲ್ಲರ ಮನೆ ಮನಗಳಲ್ಲೂ ಗೆಳೆತನ, ಆತ್ಮೀಯತೆ, ಸಹೋದರತ್ವ ತುಂಬಿ ತುಳುಕಲಿ. ದೀಪಾವಳಿ ಹಬ್ಬದಲ್ಲಿ ಸ್ವಾತಂತ್ರ್ಯ, ಸಂಭ್ರಮ ಹಾಗೂ ಸಹೋದರತ್ವದ ಅಂಶಗಳು ಅಡಕವಾಗಿವೆ.

ದೀಪಾವಳಿ ದುಷ್ಟತನದ ಮೇಲೆ ಒಳ್ಳೆಯತನದ ಗೆಲುವನ್ನು ಆಚರಿಸುತ್ತದೆ. ಒಳ್ಳೆಯತನವು ಜಾಗೃತಗೊಂಡು ಸಂಘಟಿತವಾಗಿ ಕಾರ್ಯಪೃವೃತ್ತವಾದಾಗ ದುಷ್ಟತೆಯ ಪ್ರಭಾವ ಕಡಿಮೆಯಾಗುತ್ತದೆ. ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಅಸುರ ಪ್ರವೃತ್ತಿ ಹಾಗೂ ವಿದ್ವಂಸಕ ಪೃವೃತ್ತಿಯನ್ನು ನಾಶಮಾಡಿ ದೈವಿ ಪ್ರವೃತ್ತಿಯನ್ನು ಸ್ಥಾಪಿಸಬೇಕು.

ಕೆಟ್ಟತನ ಹಾಗೂ ಅಹಂಕಾರದ ಉಚ್ಛಾಟನೆ ಮಾಡಿ ಆತ್ಮಜ್ಯೋತಿ ಪ್ರಕಾಶಿಸಿ. ತಾನೇ ಉರಿದು ಜಗಕೆ ಬೆಳಕು ನೀಡುವ ಜ್ಯೋತಿ ನೋಡುತ್ತ ಮನುಷ್ಯ ಸ್ವಾರ್ಥವನ್ನು ಮರೆತು, ಜ್ಯೋತಿಯಂತೆ ಇತರರಿಗೆ ನೆರವಾಗಲು ದೀಪಾವಳಿ ಪ್ರೇರಣೆ ನೀಡಲಿ.

ADVERTISEMENT

ನಾಡಿನ ಸಮಸ್ತ ಬಾಂಧವರಿಗೆ ದೀಪಾವಳಿ ಹಬ್ಬದ ಶುಭಾಷಯಗಳು. ಬೆಳಕಿನ ಮೂಲವಾದ ಭಗವಂತ, ಎಲ್ಲರ ಹೃದಯಗಳನ್ನು, ಮನೆ-ಮನಗಳನ್ನು ಬೆಳಗಿಸಿ ಶಾಂತಿ ಸಮೃದ್ಧತೆ ದಯಪಾಲಿಸಲಿ.

–ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.