ADVERTISEMENT

ಉಡುಪಿ: ಇಬ್ಬರು ಸೋಂಕಿತರು ಸಾವು, 169 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 15:10 IST
Last Updated 12 ಸೆಪ್ಟೆಂಬರ್ 2020, 15:10 IST

ಉಡುಪಿ: ಶನಿವಾರ ಇಬ್ಬರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದು, 169 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಡುಪಿ ತಾಲ್ಲೂಕಿನ 89 ಹಾಗೂ 70 ವರ್ಷದ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಸೋಂಕಿತರಲ್ಲಿ ಉಡುಪಿಯ 95, ಕುಂದಾಪುರದ 47, ಕಾರ್ಕಳದ 22 ಹಾಗೂ ಇತರೆ ಜಿಲ್ಲೆಗಳ ಐವರು ಸೇರಿದ್ದು, 92 ಪುರುಷರು ಹಾಗೂ 77 ಮಹಿಳೆಯರು ಇದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 58, ಶೀತಜ್ವರದ ಲಕ್ಷಣಗಳಿದ್ದ 46, ತೀವ್ರ ಉಸಿರಾಟದ ಸಮಸ್ಯೆ ಇದ್ದ ಒಬ್ಬರಲ್ಲಿ, ಅಂತರ ಜಿಲ್ಲೆ ಪ್ರವಾಸದಿಂದ ಐವರಿಗೆ, ಅಂತರ ರಾಜ್ಯ ಪ್ರವಾಸದಿಂದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. 58 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ.

ADVERTISEMENT

1125 ಶಂಕಿತರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಶನಿವಾರ 238 ಸೇರಿ ಇದುವರೆಗೂ ಜಿಲ್ಲೆಯಲ್ಲಿ 12,022 ಮಂದಿ ಗುಣಮುಖರಾಗಿದ್ದಾರೆ. 1760 ಸಕ್ರಿಯ ಪ್ರಕರಣಗಳು ಇವೆ. ಒಟ್ಟು ಪ್ರಕರಣಗಳ ಸಂಖ್ಯೆ 13912 ಇದ್ದು, ಮೃತರ ಸಂಖ್ಯೆ 130ಕ್ಕೇರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.