ADVERTISEMENT

ಬಾರ್ಕೂರು ತಾಲ್ಲೂಕು ಪಂಚಾಯ್ತಿ: ಬಿಜೆಪಿಗೆ ಗೆಲುವು

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 16:17 IST
Last Updated 14 ನವೆಂಬರ್ 2019, 16:17 IST

ಉಡುಪಿ: ಬಾರ್ಕೂರು ತಾಲ್ಲೂಕು ಪಂಚಾಯ್ತಿ, ಬಿಲ್ಲಾಡಿ ಹಾಗೂ ಮುಂಡ್ಕೂರು ಗ್ರಾಮ ಪಂಚಾಯ್ತಿ ಕ್ಷೇತ್ರಗಳಿಗೆ ಈಚೆಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ.

ಬ್ರಹ್ಮಾವರದ ಬಾರ್ಕೂರು ತಾಲ್ಲೂಕು ಪಂಚಾಯ್ತಿ ಕ್ಷೇತ್ರದಲ್ಲಿ ಬಿಜೆಪಿಯ ಚಂದ್ರಶೇಖರ ಶೆಟ್ಟಿ 2,349 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಜಾನ್ ಪಿಕಾರ್ಡೋ 672 ಮತ ಪಡೆದರೆ, ಜೆಡಿಎಸ್‌ನ ಶೋಭಾ ಫೆರ್ನಾಂಡೀಸ್‌ 128 ಮತಗಳನ್ನು ಪಡೆದರು. 9 ಮತಗಟ್ಟೆಗಳಿಂದ 3,149 ಮತಗಳು ಚಲಾವಣೆಯಾಗಿವೆ. 47 ನೋಟಾ ಮತಗಳು ಬಿದ್ದಿವೆ.

ಬ್ರಹ್ಮಾವರದ ಬಿಲ್ಲಾಡಿ ಗ್ರಾಮ ಪಂಚಾಯ್ತಿ ಕ್ಷೇತ್ರದಲ್ಲಿ 417 ಮತಗಳನ್ನು ಪಡೆಯುವ ಮೂಲಕ ಅರುಣ ಕುಮಾರ್ ಶೆಟ್ಟಿ ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಪ್ರಭಾಕರ ಶೆಟ್ಟಿ 310 ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳು 737. ತಿರಸ್ಕೃತಗೊಂಡ ಮತಗಳು 10.

ADVERTISEMENT

ಮುಲ್ಲಡ್ಕ ಚುನಾವಣಾ ಕ್ಷೇತ್ರದಿಂದ ಮುಂಡ್ಕೂರು ಗ್ರಾಮ ಪಂಚಾಯ್ತಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 337 ಮತಗಳನ್ನು ಪಡೆದು ಸೂರಜ್ ಸಾಲಿಯಾನ್‌ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಸಂತೋಷ್‌ 300 ಮತಗಳನ್ನು ಪಡೆದಿದ್ದಾರೆ.

ಕಾರ್ಕಳದ ಮುಲ್ಯಾ ಗ್ರಾಮ ಪಂಚಾಯ್ತಿಗೆ ಸದಸ್ಯರಾಗಿ ದಿವಾಕರ ಕರ್ಕೇರಾ, ಹೇಮ, ಸರಸ್ವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.