ADVERTISEMENT

ವೆಲ್ಡರ್ ಕೈಚಳಕದಲ್ಲಿ ಮೂಡಿದ ಫಿರಂಗಿ!

ಗಮನ ಸೆಳೆಯುತ್ತಿದೆ ಸಂಗ್ರಾಮ ‘ಫಿರಂಗಿ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 2:51 IST
Last Updated 13 ಆಗಸ್ಟ್ 2022, 2:51 IST
ಫಿರಂಗಿಯೊಂದಿಗೆ ಶಂಕರ ಪೂಜಾರಿ
ಫಿರಂಗಿಯೊಂದಿಗೆ ಶಂಕರ ಪೂಜಾರಿ   

ಬ್ರಹ್ಮಾವರ: ದೇಶದೆಲ್ಲೆಡೆ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮ. ಗ್ರಾಮಾಂತರ ಭಾಗದ ಮನೆ ಮನೆಯಲ್ಲೂ ತಿರಂಗ ಧ್ವಜವನ್ನು ಅರಳಿಸಲು ಎಲ್ಲರೂ ಸಜ್ಜಾಗಿದ್ದಾರೆ. ಬ್ರಹ್ಮಾವರ ಉಪ್ಪಿನಕೋಟೆಯಲ್ಲಿ ವೆಲ್ಡಿಂಗ್‌ ಶಾಪ್‌ನಲ್ಲಿ ಕೆಲಸ ಮಾಡುವ ಶಂಕರ ಪೂಜಾರಿ ಸ್ವಾತಂತ್ರ್ಯದ ನೆನಪಿನ ಫಿರಂಗಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ.

ಉಪ್ಪಿನಕೋಟೆಯ ಎಸ್‌.ಡಿ.ಪಿ ಎಂಜಿನಿಯರಿಂಗ್‌ ವರ್ಕ್ಸ್‌ನಲ್ಲಿ ಕಳೆದ 25 ವರ್ಷಗಳಿಂದ ವೆಲ್ಡರ್‌ ಆಗಿ ಕೆಲಸ ಮಾಡುತ್ತಿರುವ ಹೊನ್ನಾಳದ ಶಂಕರ್‌ ದ್ವಿಚಕ್ರ ವಾಹನದ ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ಸುಮಾರು 7 ಕೆ.ಜಿ ತೂಕದ ಫಿರಂಗಿಯ ಮಾಡೆಲ್‌ ತಯಾರಿಸಿದ್ದು ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸಿದ್ದಾರೆ.

ಕಬ್ಬಿಣ ಮತ್ತು ಪಿವಿಸಿ ಪೈಪ್‌ಗಳ ತುಂಡುಗಳು, ಬೈಕ್‌ನ ಪ್ಲಗ್‌, ಚೈನ್‌ ಮತ್ತು ಇನ್ನಿತರ ಬಿಡಿಭಾಗಗಳನ್ನು ಉಪಯೋಗಿಸಿಕೊಂಡು 2 ದಿನದಲ್ಲಿ ಫಿರಂಗಿ ಮಾಡೆಲ್‌ ಅನ್ನು ತಯಾರಿಸಿದ್ದಾರೆ. ಸ್ಥಳೀಯರಾದ ಉದಯ ಕುಮಾರ್‌ ಇದಕ್ಕೆ ಬಣ್ಣವನ್ನು ನೀಡಿ ಮೆರುಗನ್ನು ನೀಡಿದ್ದಾರೆ. ಹೊನ್ನಾಳದ ಕಿರಣ್‌ ಪೂಜಾರಿ ಮತ್ತು ಸಾಲಿಕೇರಿಯ ಎಂ.ಉಪೇಂದ್ರ ಪ್ರಭು ಅವರ ಸಹಕಾರದಲ್ಲಿ ಈ ಕಲಾಕೃತಿ ಮೂಡುಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.