ಬ್ರಹ್ಮಾವರ: ಕೋಟ ವಲಯದ ಗಾಣಿಗ ಯುವ ಸಂಘಟನೆ ಆಶ್ರಯದಲ್ಲಿ ಗಾಣಿಗ ಮಹಿಳಾ ಸಂಘಟನೆ ಸಹಕಾರದಲ್ಲಿ ಹಾರಾಡಿ ಮಹಾಬಲ ಗಾಣಿಗ ಕುಟುಂಬ ಸದಸ್ಯರು ಕೊಡುವ ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣಾ ಪ್ರಶಸ್ತಿಗೆ ಸ್ತೀ ವೇಷಧಾರಿ ಮಂದಾರ್ತಿ ಅಣ್ಣು ನಾಯ್ಕ (ಎಂ.ಎ ನಾಯ್ಕ್) ಆಯ್ಕೆಯಾಗಿದ್ದಾರೆ.
ಕೋಟ ಗಾಣಿಗ ಯುವ ಸಂಘಟನೆ ಆಶ್ರಯದಲ್ಲಿ ಇದೇ 18ರಂದು ಸಾಸ್ತಾನ ಟೋಲ್‌ಗೇಟ್ ಸಮೀಪದ ಸಂಭ್ರಮ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಂಸ್ಕೃತಿಕ ಸ್ಪರ್ಧೆ, ಸಿನಿಮಾ ನೃತ್ಯ, ಯಕ್ಷಗಾನ ನೃತ್ಯ, ಭಾವಗೀತೆ ಮತ್ತು ಸಿನಿಮಾ ಗೀತೆ, ಜನಪದ ನೃತ್ಯ ಸ್ಪರ್ಧೆಗಳು ನಡೆಯಲಿವೆ ಎಂದು ಸಂಘಟನೆಯ ಅಧ್ಯಕ್ಷ ಗಿರೀಶ ಗಾಣಿಗ ಬೆಟ್ಲಕ್ಕಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.