ಉಡುಪಿ: ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ ಜನ್ಮದಿನಾಚರಣೆ ಪ್ರಯುಕ್ತ ಮಿಲಾದುನ್ನಬಿಯನ್ನು ಜಿಲ್ಲೆಯ ಮಸೀದಿಗಳಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಉಡುಪಿ ತಾಲ್ಲೂಕಿನ ದೊಡ್ಡಣಗುಡ್ಡೆ, ಹೂಡೆ, ನೇಜಾರು, ಕುಂದಾಪುರ, ಶಿರೂರು, ಕೋಡಿ, ಕಾರ್ಕಳ, ಕಾಪುವಿನ ಹೆಜಮಾಡಿ, ಪಡುಬಿದ್ರಿ, ಪಲಿಮಾರು, ಎರ್ಮಾಳು, ಮುದರಂಗಡಿ, ಉಚ್ಚಿಲ, ಮೂಳೂರು, ಕಾಪು, ಕಟಪಾಡಿ, ಮಜೂರು, ಮಲ್ಲಾರು, ಶಿರ್ವ, ಮಣಿಪುರ ಸೇರಿದಂತೆ ಹಲವು ಮಸೀದಿಗಳಲ್ಲಿ ಮಿಲಾದುನ್ನಬಿ ಆಚರಿಸಲಾಯಿತು.ಕೋವಿಡ್ ಹಿನ್ನೆಲೆಯಲ್ಲಿ ರ‍್ಯಾಲಿ ರದ್ದುಪಡಿಸಲಾಗಿತ್ತು.
ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ವೌಲಿದ್ ಮಜ್ಲೀಸ್ ನಡೆಯಿತು. ಮದರಸಗಳ ಪ್ರವಾದಿ ಸಂದೇಶಗಳನ್ನು ಒಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ದೊಡ್ಡಣಗುಡ್ಡೆ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ರಿಫಾಯಿಯ ಯಂಗ್‌ಮೆನ್ಸ್ ಸಂಘಟನೆಯಿಂದ ಅಂಗವಿಕಲ ವಿದ್ಯಾರ್ಥಿ ಸ್ವರೂಪ್‌ಗೆ ಸೈಕಲ್ ವಿತರಣೆ ಮಾಡಲಾಯಿತು. ಇದೇವೇಳೆ ಹೆಲ್ಪ್ ಡೆಸ್ಕ್ ಉದ್ಘಾಟಿಸಲಾಯಿತು.
ಈ ಸಂದರ್ಭ ಮಸೀದಿ ಖತೀಬ್ ನಝೀರ್ ಅಹ್ಮದ್ ಸಹದಿ, ಅಧ್ಯಕ್ಷ ಹಾಜಿ ಕೆಎಸ್ಎಂ ಅಬ್ದುಲ್ ಖಾದರ್, ಯಂಗ್‌ಮೆನ್ ಅಧ್ಯಕ್ಷ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು. ಮೀಲಾದುನ್ನಬಿ ಪ್ರಯುಕ್ತ ಮಸೀದಿಯಲ್ಲಿ ವೌಲಿದ್ ಮಜ್ಲೀಸ್, ನಂತರ ಹಝ್ರತ್ ಅಶೇಖ್ ಅಹ್ಮದ್ ಅಲ್ಹಾದಿ ಅವರ ದರ್ಗಾ ಝಿಯಾರತ್ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.