ADVERTISEMENT

ಪರ್ಕಳ ರಸ್ತೆ ದುರವಸ್ಥೆ ಬಗ್ಗೆ ಯಕ್ಷ ಗೀತೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 16:32 IST
Last Updated 7 ಅಕ್ಟೋಬರ್ 2021, 16:32 IST

ಉಡುಪಿ: ಮಣಪಾಲ ಸಮೀಪದ ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ 169 ‘ಎ’ ತುಂಬೆಲ್ಲ ಹೊಂಡ–ಗುಂಡಿಗಳು ಬಿದ್ದಿದ್ದು, ರಸ್ತೆ ಅವ್ಯವಸ್ಥೆಯ ಬಗ್ಗೆ ಯಕ್ಷಗಾನ ಕಲಾವಿದರೊಬ್ಬರು ಹಾಡಿರುವ ಯಕ್ಷ ಗೀತೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಾಸಬದ್ಧವಾಗಿ ರಸ್ತೆಯ ದುರವಸ್ಥೆಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ವ್ಯಂಗ್ಯಭರಿತವಾಗಿ ಟೀಕಿಸಲಾಗಿದೆ. ಸವಾರರು ವಾಹನ ಚಲಾಯಿಸುವಾಗ ಅನುಭವಿಸುವ ಸಂಕಟವನ್ನು ವಿವರಿಸಲಾಗಿದೆ. ಈ ಗೀತೆಯನ್ನು ಫೇಸ್‌ಬುಕ್, ವಾಟ್ಸ್‌ ಆ್ಯಪ್‌ಗಳಲ್ಲಿ ನೋಡಿ ಸಾರ್ವಜನಿಕರು ಖುಷಿ ಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT